Monday, July 5, 2010

ಲೇ....ನೋಡೆ ಜೋಗ...."


ಜೋಗ ಜಲಪಾತ ಹಿಂದೆ ಜಗದ್ವಿಖ್ಯಾತ.!. ಇರಲಿ ಪ್ರತೀ ವರ್ಷದಂತೆ ಮಳೆಯಾಗಿದ್ದರೆ ಇವತ್ತಿನ ಸಮಯದಲ್ಲಿ ನಾನು ತೆಗೆದ ಜೋಗೋ ಫೋಟೋ ಹೀಗಿರುತ್ತಿರಲಿಲ್ಲ. ನೊರೆ ನೊರೆ ನೀರು ಉಕ್ಕಿ ಪ್ರಪಾತ ಸೇರುತ್ತಿತ್ತು. ಆದರೆ ಅದೇಕೋ ವರುಣ ಸ್ವಲ್ಪ ಮಟ್ಟಿಗೆ ಮುನಿದಿದ್ದಾನೆ ಅಂತ ಹೇಳಬಹುದು. ಜೂನ್ ತಿಂಗಳ ಅಬ್ಬರದ ಮಳೆ ಬೀಳಲೇ ಇಲ್ಲ. ಹಾಗಂತ ಮಳೆ ಬಂದೇ ಇಲ್ಲವೇನೋ ಅನ್ನುವಂತಿಇಲ್ಲ. ಈಗ ಮೂರುವರ್ಷದ ಹಿಂದೆ ಅಂದರೆ ೨೦೦೭ ನೇ ಇಸವಿಯಂತೀ ಬರಲಿಲ್ಲ. ಇನ್ನು ಮೂರು ತಿಂಗಳು ಬಾಕಿ ಇದೆ ಮಳೆಗೆ. ಅಷ್ಟರೊಳಗೆ ಲಿಂಗನಮಕ್ಕಿ ಆಣೆಕಟ್ಟು ತುಂಬಬೇಕು ಅಲ್ಲಿನ ಗೇಟು ತೆಗೆಯಬೇಕು ಶರಾವತಿ ಖುಷ್ ಖುಷಿಯಾಗಿ ಜುಳು ಜುಳು ಕೆಂಪಗೆ ಹರಿಯುತ್ತಾ ನಂತರ ಬಿಳಿ ಬಣ್ಣ ಪಡೆದು ಧುಮ್ಮಿಕ್ಕಬೇಕು. ಆವಾಗ ನೀವು ಅಲ್ಲಿಗೆ ಬಂದು "ವಾವ್ ಎಂತ ಅಂದ ಎಂಥ ಚಂದ......ಅಂತ ಅನ್ನಬೇಕು. ಈಗ ಪೇಪರ್ ನಲ್ಲಿ ಟಿವಿ ಯಲ್ಲಿ ಮಲೆನಾಡಿನಲ್ಲಿ ಸಾಧಾರಣದಿಂದ ಭಾರೀ ಮಳೆ ಎಂಬ ಸುದ್ಧಿ ಕೇಳಿ ಜೋಗಕ್ಕೆ ಹೋಗಿ ಬಂದುಬಿಡೋಣ ಅಂತ ಬಂದು " ಥೋ ಇಷ್ಟೇ ನೀರು" ಅಂತ ಗೋಣಗಿಕೊಂಡು ಹೋಗುವಂತಾಗಬಾರದಲ್ಲ. ಇಷ್ಟು ನೀರಾದರೆ ನಿಮ್ಮ ಮನೆಯಲ್ಲಿ ಕುಳಿತು "ಲೇ....ನೋಡೆ ಜೋಗ...." ಅಂತ ಬಿಸಿಬಿಸಿ ಬೋಂಡ ತಿನ್ನುತ್ತಾ ನೋಡಬಹುದು ಸಂಪದದ ಸಹಾಯದಿಂದ, ಎಂದು ಇವತ್ತು ಮಧ್ಯಾಹ್ನ ಎದ್ದೂ ಬಿದ್ದು ಜೋಗಕ್ಕೆ ಹೋಗಿ ಫೋಟೋ ಕ್ಲಿಕ್ಕಿಸಿ ತಂದು ಹಾಕಿದ್ದೇನೆ. ನೀರು ಜೋರಾದಾಗ ಹೇಳುತ್ತೇನೆ ಆವಾಗ ಖುದ್ದಾಗಿ ಬರುವಿರಂತೆ ಅಷ್ಟರತನಕ ಇಷ್ಟು ಸಾಕು.. ಹ್ಯಾಪಿ ಸಂಡೆ....

6 comments:

ಸಾಗರದಾಚೆಯ ಇಂಚರ said...

aadare ea varsha jogadalli neeride antidaaralla?

Unknown said...

ಚಿತ್ರದಲ್ಲಿದ್ದಷ್ಟೇ ಇದೆ

ಮನದಾಳದಿಂದ............ said...

ಜೋಗದ ಇಂದಿನ ಪರಿಸ್ಥಿತಿಗೆ ತುಂಬಾ ಬೇಸರವಾಯಿತು. ಈ ಪರಿಣಾಮಕ್ಕೆ ಪರೋಕ್ಷವಾಗಿ ನಮ್ಮ ಕೊಡುಗೆ ಬಹಳ ಇದೆ ಅಲ್ವಾ?

srikanta said...

Good article sharma sir.

Hope u r doing fine in the midst of paradise called talawata!!

Unknown said...

ಧನ್ಯವಾದಗಳು
ಪ್ರವೀಣ್-ಶ್ರೀಕಾಂತ್

ಸೀತಾರಾಮ. ಕೆ. / SITARAM.K said...

ಚೆಂದದ ಮಾಹಿತಿ! ಬೇಗ ಜೋಗ ತು೦ಬಿ ಹರಿಯಲಿ!