ಬೇಕಾಗುವ ಸಾಮಾಗ್ರಿ: ಹಿತ್ತಲಿಂದ ಆಗಷ್ಟೆ ಕೊಯ್ದ ಮುಳ್ಳು ಸೌತೇ ಕಾಯಿ- ಸೌತೇ ಕಾಯಿ ಜತೆಯಲ್ಲಿಯೇ ಕೊಯ್ದುಕೊಂಡು ಬಂದ ನಿಂಬೆಹಣ್ಣು ಹಾಗೂ ಸೂಜಿ ಮೆಣಸಿನಕಾಯಿ- ವಾಟೆ ಹುಡಿ-ಕೊಬ್ಬರಿ ಎಣ್ಣೆ-ರುಚಿಗೆ ತಕ್ಕಷ್ಟು ಉಪ್ಪು. ಸೌತೇಕಾಯಿ ಇನಸ್ಟಂಟ್ ಆಗಿ ಹೆಚ್ಚಿಕೊಡಲು ಅಮ್ಮ, ಭಾಗ ತಿನ್ನಲು ನಾಲ್ಕೈದು ಜನ.
ಅಯ್ಯೋ ಅದೇನೋ ದೊಡ್ಡ ಅಡಿಗೆ ಸಾಹಿತ್ಯದ ಪಟ್ಟಿಯ ತರ ಆಯ್ತು ವಿಷಯ ಹೇಳು ಅಂತ ನೀವು ಅಂದುಕೊಳ್ಳಬಹುದು. ಈಗ ಹೊರಟಿದ್ದೇ ಅಲ್ಲಿಗೆ. ಮಧ್ಯಾಹ್ನ ಹನ್ನೆರಡು ಘಂಟೆಯ ಹೊತ್ತಿಗೆ ನಮ್ಮ ಮಲೆನಾಡಿನ ಮನೆಗಳಲ್ಲಿ ಈ ಸೌತೇಕಾಯಿ ಉಪ್ಪುಕಾರದ ಕಾರ್ಯಕ್ರಮ ವಾರಕ್ಕೊಮ್ಮೆಯಾದರೂ ಇರುತ್ತದೆ.ಜುಲೈ ತಿಂಗಳ ನಂತರ ಹಿತ್ತಲ ಸೌತೇ ಬಳ್ಳಿಗಳು ಕಾಯಿಬಿಡಲಾರಂಬಿಸಿದ ತಕ್ಷಣ ಅದು ಸೈಜಿಗೆ ಬರಲು ಒಬ್ಬರಲ್ಲಾ ಒಬ್ಬರು ಕಾಯುತ್ತಿರುತ್ತಾರೆ. ಅಯ್ಯೋ ಅದೇನು ಅಂತಹಾ ಮಜದ ವಿಷಯ ಅಂತ ನಿಮಗೆ ಅನ್ನಿಸಬಹುದು. ಇರುವುದು ಅಲ್ಲಿಯೇ. ಪರಿಮಳಯುಕ್ತ ಮನೆನಿಂಬೆಹಣ್ಣು ಎಳೆ ಸೌತ ಕಾಯಿ, ಸೂಜಿಮೆಣಸಿನ ಖಾರ, ವಾಟೆಪುಡಿಯ ಹುಳಿ ಬೆರತದ್ದಷ್ಟೇ ರುಚಿ ಅಲ್ಲಿಲ್ಲ. ಅದರ ಜತೆ ಗಾಸಿಪ್ಪು ಊರ ಸುದ್ಧಿ ಎಲ್ಲಾ ಖಾರದ ಬಾಯಿ ಸೆಳೆಯುತ್ತಾ ವಿಷಯವಾಗುತ್ತದೆ ಅಲ್ಲಿ. ಒಬ್ಬರು ಸೌತೇಕಾಯಿಯನ್ನು ಹೆಚ್ಚಿಕೊಡುವವರು ಸುತ್ತಲೂ ಮೂರ್ನಾಲ್ಕು ಜನ ಒಬ್ಬೊಬ್ಬರು ಒಂದೊಂದು ಸುದ್ಧಿ ಹೇಳುತ್ತಾ ಸೌತೇ ಕಾಯಿ ಹೆಚ್ಚಿದಂತೆ ಹೆಚ್ಚಿದಂತೆ ಖಾಲಿಯಾಗಿಬಿಡುತ್ತದೆ. (ಮತ್ತೆ ಈ ಫೋಟೋದಲ್ಲಿ ಅಷ್ಟೊಂದು ಪೀಸ್ ಇದೆ ಅಂತ ನೀವು..? ಕೇಳಬಹುದು. ಅದು ಫೋಟೋಕ್ಕಾಗಿಯೇ ಗಂಟುಬಿದ್ದು ಉಳಿಸಿಕೊಂಡದ್ದು) ಸೌತೇ ಕಾಯಿ ಮುಗಿದಂತೆ ನಂತರ ಸಿಪ್ಪೆಯತ್ತಲೂ ಕೆಲವು ಜನರ ವಾರೇನೋಟ ಬಿದ್ದು ಅದೂ ಖಾಲಿ. ಆನಂತರ ನಿಂಬೆಹಣ್ಣಿನ ಬಾಗದೊಳಕ್ಕೆ ಉಪ್ಪುಕಾರ, ಹಾಗೆ ಅದೂ ಖಾಲಿ.(ಇದು ಅಭ್ಯಾಸವಿದ್ದ ಓದುಗರಿಗೆ ಈಗಾಗಲೇ ಬಾಯಲ್ಲಿ ಜುಳುಜುಳು ನೀರು ಬಂದಾಯಿತು. ಸತ್ಯ ಅಂದರೆ ಬರೆಯುವಾಗ ನನಗೇ ಬರುತ್ತಿದೆ) ಆನಂತರದ್ದು ಬಟ್ಟಲಿನಲ್ಲಿ ಉಳಿಯುವ ಉಪ್ಪುಕಾರದ ನೀರು. ಅದು ಸೌತೇಕಾಯಿ ಭಾಗದಲ್ಲಿರುವ ನೀರಿನ ಜತೆ ಸೇರಿ ಒಳ್ಳೆ ರುಚಿ ಬಂದಿರುತ್ತದೆ. ಅದು ಖಾಲಿಯಾದನಂತರದ್ದೇ ರಾಮಾಯಣ. ಖಾರ ಹೆಚ್ಚಾಗಿ ಅರ್ದಕ್ಕರ್ದ ಜನ ಸೊಸ್ ಸೊಸ್ ಅಂತ ಬಾಯಿಯೊಳಕ್ಕೆ ಗಾಳಿ ಸೇದಲು ಆರಂಭಿಸುತ್ತಾರೆ. ಆವಾಗ ಚಿಟ್ಟೆ ತುದಿಯಲ್ಲಿ ಹೋಗಿ ಕುಕ್ಕುರಗಾಲಿನಲ್ಲಿ ಕುಳಿತು ಬಾಯಿತೆರೆದು ನೆಲದತ್ತ ಬಗ್ಗಿದರಾಯಿತು. ಬಾಯಿಂದ ಜುಳುಜುಳು ನೀರು ಬಸಿಯತೊಡಗುತ್ತದೆ. ಖಾರದ ತಾಕತ್ತಿಗೆ ಕಣ್ಣಿಂದಲೂ ನೀರು ಬರುತ್ತದೆ. ಒಂದೈದು ನಿಮಿಷ ಪ್ರಪಂಚದಲ್ಲಿ ನಾವಿರುವುದಿಲ್ಲ ನಮ್ಮೊಳಗೆ ಪ್ರಪಂಚ. ಬಾಯಿಂದ ನೀರೆಲ್ಲಾ ಸುರಿದು ಹೋದಮೇಲೆ ಸ್ವರ್ಗ. ಅದರ ಮಜ ಅನುಭವಿಸಿದವರಿಗೇ ಗೊತ್ತು. ಹೀಗಿದೆ ಸೌತೇಪುರಾಣ, ಅವಕಾಶ ಸಿಕ್ಕಾಗ ಅನುಭವಿಸಿ. ನಾನು ಹೇಳಿದ ಸತ್ಯದ ದರ್ಶನವಾಗುತ್ತದೆ.

13 comments:
ಅಣ್ಣಾಆಆಆಆಆಆಆಆಆ... ಹಿಂಗೆಲ್ಲ ಹೊಟ್ಟೆ ಉರ್ಸಿದ್ರೆ ಕಣ್ ಪಟ್ಲು ಆಗ್ತು ಅಷ್ಟೇ. :x
abba!!...
nimma lekhana odi nange baayalli neeru bandoytu... :-)oorina nenp aaytu....:-)
ayyoo devare nodida kudale bayalli nine helidante julu julu niru bande hotu. navella ottige kutu tinnutidda kala tumbaa nenapige bantu, hange bejaru aatu a maja ega anubhavisuva yoga ille heli. photo nodi khushiyat.
ಬಾಯಲ್ಲಿ ನೀರುರ್ಥಾ ಇದೆ !!!
ಚೆ೦ದದ ಲೇಖನ!
ಗೆ ಸುಶ್ರುತ
ಒಂದೆರಡು ದಿನ ರಜ ಜಡ್ದಿಕ್ಕಿ ಬಾರಾ. ಬಾರಿಸ್ಲಕ್ಕು.
ಗೆ ದಿವ್ಯಾ
ಸೌತೆಕಾಯಿ ಉಪ್ಪುಕಾರಕ್ಕೆ ಊರನ್ನು ನೆನಪಿಸುವ ತಾಕತ್ತಿದೆ ಅಂತಾಯ್ತು ನೋಡಿ. ಧನ್ಯವಾದ್ಗಳು
ಗೆ ರತ್ನಕ್ಕ
ಬರ್ಯಕಿದ್ರೆ ನಿನ್ನ ಕಾಮೆಂಟ್ ಖಂಡಿತ ಅಂತ ಲೆಕ್ಕ ಹಾಕಿದ್ದಿ, ಇನ್ನು ನವ್ಯ ನೋಡಿದ ಮೇಲೆ ಇನ್ನು ನವ್ಯ ನೋಡಿದಮೇಲೆ ಇನಷ್ಟು.......
ಗೆ ಸೀತಾರಾಮ್
ಹುಳಿಗೆ ಎಂತಹ ತಾಕತ್ತು ಇದೆ ನೋಡಿ ತ್ಯಾಂಕ್ಸ್
ಹೆ ಹೆ ಹೆ .. ಚೊಳ್ಳ್ ನೀರು ಬರ ಹಾಂಗಿದ್ದಲೊ ...
ನಾನು ನಿನ್ನೆ ಸಂಜೆ ಮಡಿವಾಳ ಮಾರ್ಕೆಟ್ ಗೆ ಹೋಗಿ ಎಳೆ ಸೌತೆ ಕಾಯಿ ತಂದಿದ್ದೆ ..
ಊರಿಂದ ತಂದ ಸೂಜಿ ಮೆಣಸು ಇತ್ತು .. ಮೆಣಸು ಖಾರ , ಉಪ್ಪು ಲಿಂಬು, ಮಾಡಿದ್ದು ಸಮಾ
ತಿಂದಿದ್ದು .. ಇವತ್ತು ಸ್ವಲ್ಪ ತಂಡಿ ವಾತಾವರಣ . ಹ ಹ ಹ ..
ಯೀ!
ನಾನು ಈಗ್ ಎಲ್ ಹೋಗ್ಲಪಾ ಸೌತೇ ಕಾಯ್ ಗೆ! ಹೊರ್ಗೆ ಮಳೆ ಬರ ಹಾಂಗ್ ಬೇರೆ ಆಯ್ದು..:(
ಸೂಪರ್ರು ! ಮಧ್ಯಾಹ್ನ ಎಲ್ಲರೂ ಮನ್ಕ್ಯಂಡ್ ಮೇಲೆ ಸೌತೆಕಾಯಿ ಕದ್ಕಂಡು, ತೋಟದಲ್ಲಿ ಸಂಕದ ಮೇಲೆ ಉಪ್ಪು ಖಾರ ಹಾಕ್ಯಂಡ್ ತಿಂತಿದ್ದ ದಿನಗಳು ನೆನಪಾತು.
ಮಾವಿನ್ ಕಾಯಿ ಉಪ್ಪು ಖಾರನು ಚಲೋ ಆಗ್ತು.
ಈಗ urgent ಆಗಿ ಸೌತೆಕಾಯಿ ಉಪ್ಪು ಖಾರ ಬೇಕಾತಲ!
ಏನು ಸ್ವಾಮಿ,
ಈ ತರ ಹೊಟ್ಟೆ ಉರಿಸೋದಾ? ಅಲ್ಲ, ನಮ್ಮ ಮೇಲೆ ಅದೇನು ಕೋಪ ಅಂತ?
ಕಣ್ಣು ಮೂಗು ಬಾಯಲ್ಲಿ ಎಲ್ಲೆಂದರಲ್ಲಿ ಬಳ ಬಳ ನೀರಿಸಿಬಿಟ್ರಲ್ಲಾ!
Papi Foto bere haki hute uristya...
last baagakke fighting and naanu tinakare appana kayam dailogue "Ramya Nodkyandu tinnu" helidkoodle naavu soutekayi baaga nodadu tinadu madida scene nenpatu good one !
ಏನು ಸರ್
ಸವತೆಕಾಯಿ ನೆನಪು ಮಾಡಿ ಊರಿಗೆ ಕರೆದುಕೊಂಡು ಹೋದ್ರಿ
ಎಲ್ಲ ನೆನಪಾಯ್ತು
ಬಾಲ್ಯದ ಆ ದಿನಗಳು
ರಾಘುಮಾವ,
ಹಿಂಗೆಲ್ಲಾ ಹೊಟ್ಟೆ ಉರಿಸ್ಲಾಗ :(
Post a Comment