Wednesday, August 4, 2010

ಮತ್ತಿ ಎಲೆ ಶ್ಯಾಂಪು ನೆತ್ತಿ ಮೇಲೆ ತಂಪು.

ತಲೆಕೂದಲಿಗೊಂದು ಮಜಬೂತು ಸ್ನಾನ ಮಾಡಿಸಬೇಕು ಅಂತಾದರೆ ಈ ಕಾಲದಲ್ಲಿ ಶ್ಯಾಂಪೂ ಅತ್ಯವಶ್ಯಕ. ನೊರೆನೊರೆ ಯೆಂಬ ಬೆಳ್ಳನೆಯ ರಾಶಿ, ಸುವಾಸನೆ, ಸ್ನಾನದ ನಂತರ ಕೂದಲಿಗೆ ಬರುವ ಹೊಳಪು, ಮುಂತಾದವುಗಳಿಗೆ ಶ್ಯಾಂಪೂ ಪರಿಣಾಮಕಾರಿ. ಮಹಿಳೆಯರ ವಿಷಯದಲ್ಲಂತೂ ಕೂದಲು ಉನ್ನತ ಸ್ಥಾನ ಪಡೆದಿರುವುದರಿಂದ ಅದಕ್ಕೆ ವಿಶೇಷ ಆರೈಕೆ. ಬಳಸುವ ಶ್ಯಾಂಪೂ ಜತೆಗೆ ಕಂಡೀಷನರ್ ಮುಂತಾದವುಗಳ ಪಟ್ಟಿ ದೊಡ್ಡದಿರುತ್ತದೆ. ಮತ್ತೆ ಯಾವ ಕಂಪನಿಯ ಯಾವ ಬ್ರ್ಯಾಂಡ್ ಬಳಸಿದರೆ ಪರಿಣಾಮಗಳೇನು? ಎಂಬುದು ಬಾಯಿಪಾಠವಾಗಿರುತ್ತದೆ. ಇನ್ನು ರಾಸಾಯನಿಕ ಬಳಸಲು ಒಪ್ಪದ ಜನರು ಅಂಗಡಿಯಲ್ಲಿ ದೊರಕುವ ಶೀಕೆಕಾಯಿ ಅಂಟುವಾಳ ಚಿಗರೆ ಪುಡಿ ಮುಂತಾದವುಗಳಿಗೆ ಮೊರೆ ಹೋಗುತ್ತಾರೆ. ಆದರೆ ಮಲೆನಾಡ ಮಹಿಳೆಯರು ತಮ್ಮ ಕೂದಲಿಗೆ ಮೆರಗುಕೊಡಲು ಇನ್ನೂ ನಿಸರ್ಗವನ್ನೇ ಅವಲಂಬಿಸಿದ್ದಾರೆ. ಮತ್ತಿ ಎಂಬ ಗಿಡದ ಸೊಪ್ಪು ಅವರ ತಲೆಕೂದಲನ್ನು ನಿರಂತರವಾಗಿ ಆರೈಕೆ ಮಾಡುತ್ತಿದೆ.
ಮತ್ತಿ ಎಂಬ ಈ ಕಾಡುಗಿಡ ಮಲೆನಾಡಿನ ಪರಿಸರದಲ್ಲಿ ತನ್ನಷ್ಟಕ್ಕೆ ತಾನೇ ವಿಫುಲವಾಗಿ ಬೆಳೆಯುತ್ತದೆ. ಮರವಾದ ನಂತರ ಉತ್ತಮ ನಾಟವಾಗಿಯೂ ಇದು ಬಳಕೆಯಾಗುತ್ತದೆ. ಆದರೆ ಅದಕ್ಕಿಂತ ಮೊದಲು ಇದರ ಎಲೆಗಳು ಉತ್ತಮ ಶ್ಯಾಂಪೂವಾಗಿ ಲಾಗಾಯ್ತಿನಿಂದಲು ಮಲೆನಾಡಿನಲ್ಲಿ ಬಳಕೆಯಲ್ಲಿದೆ. ಇದರಲ್ಲಿ ಗಂಡುಮತ್ತಿ ಹೆಣ್ಣುಮತ್ತಿ ಎಂಬ ಎರಡು ಪ್ರಬೇಧಗಳಿದ್ದು ಯಥಾಪ್ರಕಾರ ಗಂಡುಮತ್ತಿ ಗಂಪನ್ನು ನೀಡಲಾರದು. ಹೆಣ್ಣುಮತ್ತಿಯ ಹತ್ತು ಎಲೆಗಳನ್ನು ಹತ್ತು ನಿಮಿಷ ನೀರಿನಲ್ಲಿ ನೆನೆಹಾಕಿ ನಂತರ ಅದೇ ನೀರಿಗೆ ಸೊಪ್ಪನ್ನು ಕಿವುಚಿದರೆ ಗಂಪಿನ ಶ್ಯಾಂಪೂ ಒಂದು ತಲೆಯ ಬಳಕೆಗೆ ಸಿದ್ಧ. ಇದರ ಜತೆ ಸ್ವಲ್ಪವೇ ಸ್ವಲ್ಪ ಶೀಕೇಕಾಯಿ ಪುಡಿ ಬೆರಸಿ ಕೂದಲಿಗೆ ಹಚ್ಚಿದರೆ ಗಂಪಿನ ಜತೆ ತಂಪು ಕೂಡ. ಹಾಗಾಗಿ ಯಾವ ಕಂಪನಿಯ ಶ್ಯಾಂಪೂಗಳು ಇದರ ಮುಂದೆ ನಿಲ್ಲಲಾರವು. ಶೀಕೆಕಾಯಿ ಬೆರಸಿದ ನಂತರ ಮತ್ತಿಗಂಪು ಕಂಡೀಷನರ್ ನಂತೆ ಕೆಲಸ ಮಾಡುತ್ತದೆ. ಬೇಸಿಗೆಯಲ್ಲಿ ಇದರ ಎಲೆಯನ್ನು ಒಣಗಿಸಿ ಪುಡಿಮಾಡಿಟ್ಟುಕೊಂಡರೆ ವರ್ಷಪೂರ್ತಿ ಬಳಸಬಹುದು. ಆದರೆ ಆಗಷ್ಟೆ ಕೊಯ್ದ ಎಲೆಗಳಿಂದ ಮಾಡಿದ ಗಂಪಿನಷ್ಟು ತಾಜಾತನ ಇರುವುದಿಲ್ಲ. ಹೀಗೆ ಮತ್ತಿ ತನ್ನ ಎಲೆಗಳಮೂಲಕ ತಲೆತಲಾಂತರದಿಂದ ಮಹಿಳೆಯ ನೆತ್ತಿಯನ್ನು ತಂಪಾಗಿಸುತ್ತಾ ಬಂದಿದೆ
(ಇಂದಿನ ವಿಜಯಕರ್ನಾಟಕ ಲವಲವಿಕೆಯಲ್ಲಿ ಪ್ರಕಟಿತ)

6 comments:

ಮನದಾಳದಿಂದ............ said...

ಮಲೆನಾಡಲ್ಲಿ ಇಂತಹ ಅದೆಷ್ಟೋ ನಿತ್ಯಬಳಕೆಯ ಗಿಡಗಳು ಬಳಕೆಯಲ್ಲಿವೆ........
ಅಂತಹದುರಲ್ಲಿ ಮತ್ತಿ ಎಳೆಯೂ ಕೂಡ ಒಂದು, ಮತ್ತಿ ಎಳೆಯ ಬಗ್ಗೆ ಚಂದದ ಮಾಹಿತಿ,
ಧನ್ಯವಾದಗಳು.

ದಿವ್ಯಾ said...

ರಾಘಣ್ಣ,
ಅಜ್ಜಿ ತಲೆ ಸ್ನಾನ ಮಾಡ್ಸಿ ಕೊಡಕಿದ್ರೆ ಖಾಯಂ ನಂಗಕ್ಕೆ ಈ ಗಂಪು ಹಾಕ್ತಿದ್ದ. ನಾ ಬೇಡ ಹೇಳ್ತಿದ್ದಿ. "ಮತ್ತಿ ಸೊಪ್ಪಿನ ಗಂಪೆ ಅಪಿ, ಎಂತು ಆಗ್ತಿಲ್ಲೆ ಹೇಳಿ ಹಾಕ್ತಿದ್ದ. ನನ್ಗಕ್ಕೆ ಹೇಳೇ ಗುಡ್ಡ ತಿರಗು ಹುಡ್ಕ್ಯ ಬತಿದ್ದ. ನಿನ್ ಲೇಖನ ನೋಡಿ ಎಲ್ಲಾ ನೆನಪಾತು..:-)

shreeshum said...

Thanks to
praveen And divya

Mohan G S said...

I saw your article( published in Kavithakka's name) in VK. But I have one doubt ( sumne tarle doubt). You people always suffix talavata in your names. But I presume kadavinamane leagally belongs to Hiremane grama !! But you may be mentally attached to Talavata. Please clarify.

shreeshum said...

ha ha ha Good Question Mohana.
Talavata is our family name. So i added talavata infront of my name.
Thank you

ಸೀತಾರಾಮ. ಕೆ. / SITARAM.K said...

Nice info.