Wednesday, August 25, 2010

ಮಜ ಇದೆ ಅಲ್ಲಿ.


ಬಾಲ್ಯ ಅನ್ನೋದು ಅವಸ್ಥೆಗಳಲ್ಲಿ ಅತ್ಯಂತ ಸುಂದರ ಸುಮಧುರ. ಆದರೆ ಅದು ಹಾಗೆಲ್ಲ ಅಂತ ಗೊತ್ತಾಗುವುದು ದೊಡ್ಡವರಾದ್ಮೇಲೆ ಅನ್ನೋದು ವಿಪರ್ಯಾಸ. ಆವಾಗ ಯಾವತ್ತು ನಾನು ಎತ್ತರದವನಾದೇನೋ ಅಂತ ಅನ್ನಿಸುತ್ತಿರುತ್ತದೆ. ಹಾಗೆ ಅನ್ನಿಸಲು ಪ್ರಮುಖ ಕಾರಣ ಯಾರೂ ಬೈಯ್ಯುವವರು ಇರೋದಿಲ್ಲ ಅನ್ನೋದು. ಇನ್ನು ಮಿಕ್ಕಂತೆ ಹತ್ತು ಹಲವಾರು ಕಾರಣಗಳಿರುತ್ತವೆ ಅವರವರಿಗೆ ಸಿಕ್ಕ ಪರಿಸರಕ್ಕೆ ತಕ್ಕಂತೆ. ನನಗೆ ಆಗ ಅನ್ನಿಸುತಿತ್ತು ಬೇಗ ಬೆಳೆಯಬೇಕು ಎಂದು. ಅದಕ್ಕೆ ಪ್ರಮುಖ ಎರಡು ಕಾರಣಗಳು ಸ್ಕೂಲಿಗೆ ಹೋಗುವುದು ಇರೋದಿಲ್ಲ ಹಾಗೂ ಇನ್ನೊಂದು ಚೊರ್ರ್ ಚೊರ್ರ್ ಎಂಬ ಮಜಬೂತು ಸದ್ದಿನೊಂದಿಗೆ ದೊಡ್ಡವರ ತರಹ ಅಂಗಳದಲ್ಲಿ ಕುಳಿತು ಸೋಪಿನ ನೊರೆ ಮುಖಕ್ಕೆ ಹಚ್ಚಿ ಗಡ್ದ ಮಾಡಿಕೊಳ್ಳಬಹುದು. ಅದೇಕೆ ಗಡ್ಡದ ಹುಚ್ಚು ಹತ್ತಿತೋ ಗೊತ್ತಿಲ್ಲ. ಅಂತೂ ದೊಡ್ಡವರು ಮಾಡಿಕೊಳ್ಳುತ್ತಿದ್ದ ಗಡ್ದ ಮಾಡಿಕೊಳ್ಳುವ ಕೆಲಸ ಬಹು ಇಷ್ಟವಾಗಿತ್ತು. ದುರಂತವೆಂದರೆ ಈಗ ಅದೊಂದು ಕೆಲಸ ಅತೀ ಬೇಸರದ್ದು.
ಆದರೂ ಈಗ ಸಣ್ಣ ಸಣ್ಣ ಮಕ್ಕಳನ್ನು ಅವರಪಾಡಿಗೆ,ಆಟವಾಡುತ್ತಾ ಇರುವಾಗ ನೋಡಿದರೆ ಮನದ ಮೂಲೆಯಲ್ಲಿ ಬಾಲ್ಯ ಉಕ್ಕುತ್ತದೆ. ಅವುಕ್ಕೆ ಬಡವ- ಬಲ್ಲಿದ ಪ್ರತಿಷ್ಟೆ- ಪರಾಕಷ್ಟೆ ಎಂಬಂತಹ ಹಂಗಿಲ್ಲಿದೆ ಖುಶ್ ಖುಷಿಯಾಗಿರುವುದನ್ನು ನೋಡಿದಾಗ ನಾನೂ ತುಸುಹೊತ್ತು ಬಾಲ್ಯಕ್ಕೆ ಜಾರುತ್ತೇನೆ. ಮಜ ಇದೆ ಅಲ್ಲಿ.

4 comments:

ಸೀತಾರಾಮ. ಕೆ. / SITARAM.K said...

ಎಲ್ಲರಿಗೂ ಹೀಗೆ ಅನ್ನಿಸುತ್ತೆ! ಚೆಂದದ ಲೇಖನ

ಸಂದೀಪ್ ಕಾಮತ್ said...

ಬೆಂಗಳೂರಿನ ಮಕ್ಕಳಿಗೆ ಆಡೋದಕ್ಕೂ ಜಾಗ ಇರದ್ದು ನೋಡಿ ಬೇಜಾರಾಗುತ್ತೆ.

Lahari said...
This comment has been removed by the author.
Lahari said...

ಈ ನಿಮ್ಮ ಸಾಲುಗಳು ಬದುಕಿನ ಪಯಣದ ದೋಣಿಯಲ್ಲಿ ಮತ್ತೊಮ್ಮೆ ತೇಲಬೇಕೆಂಬ ಆಸೆಯನ್ನ ಮರುಕಳಿಸುವುದರ ಜೊತೆಗೆ ನೆನೆಪುಗಳ ಬುತ್ತಿಯ ಸವಿಯನ್ನ ಮತ್ತೊಮ್ಮೆ ಸವಿಯಬೇಕೆನಿಸುವ ಭಾವನೆಯನ್ನ ಮನಸಿನಲ್ಲಿ ತುಂಭುವಂಥಹ ಕಾಯ೵ವನ್ನ ಮಾಡುತ್ತಿದೆ........ ತುಂಬಾ ಚೆನ್ನಾಗಿದೆ.