Thursday, August 26, 2010

ಮುಂಗಾರು ಮಳೆಯೇ.....


ಅದೇಕೋ ವರುಣರಾಯ ಜೋಗದಮಟ್ಟಿಗೆ ಈ ವರ್ಷ ಮುನಿಸಿಕೊಂಡಿದ್ದಾನೆ. ಎಲ್ಲಾ ಸರಿಯಾಗಿದ್ದರೆ ಈ ಇಷ್ಟೊತ್ತಿಗೆ ಜೋಗ ಜಲಪಾತ ಇಷ್ಟಾದರೂ ಇರಬೇಕಾಗಿತ್ತು. ಆದರೆ ಈಗ ಸಣ್ಣ ಮಕ್ಕಳ ಸುಸುವಿನಷ್ಟು ಬೀಳುತ್ತಿದೆ ಅಂತ ಬರೆಯಲು ಬೇಸರವಾಗುತ್ತಿದೆ. ಆದರೂ ಅದೇ ಸತ್ಯ. ಆದರೂ ಇನ್ನೂ ಸಮಯ ಮಿಕ್ಕಿಲ್ಲ ಹದಿನೈದು ದಿನ ಸಿಕ್ಕಾಪಟ್ಟೆ ಮಳೆ ಕುಟ್ಟಿದರೆ ಜಲಪಾತ್ ತುಂಬಿದರೂ ತುಂಬೀತೆ. ಆವಾಗ ರೊಂಯ್ ಅಂತ ಹೋಗಿ ಒಂದು ಫೊಟೋ ತೆಗೆದುಕೊಂಡು ಬಂದು ಇಲ್ಲಿ ಪಬ್ಲಿಸುತ್ತೇನೆ. ಸಂಸಾರ ಸಮೇತ ಕಾರು ಹತ್ತಿ "ಮುಂಗಾರು ಮಳೆಯೇ....." ಹಾಡನ್ನು ಗುನುಗುತ್ತಾ ಹೊರಡಬಹುದು ನೀವು. ಅಲ್ಲಿಯತನಕ ಇದೇ ಚಿತ್ರ.

4 comments:

Dr.D.T.Krishna Murthy. said...

ಕೆಲವೊಮ್ಮೆ ಮಂಜಿನ ಕಾರಣದಿಂದ ಮಕ್ಕಳ ಸೂಸೂ ಕೂಡ ಯಾತ್ರಿಗಳು ನೋಡಲಾಗುವುದಿಲ್ಲ.ಅವರ ಸಪ್ಪೆ ಮುಖ ನಮಗೆ ನೋಡಲಾಗುವುದಿಲ್ಲ.

ತೇಜಸ್ವಿನಿ ಹೆಗಡೆ said...

:)

PARAANJAPE K.N. said...

:))

ಮನಮುಕ್ತಾ said...

ha ha haa..:)