
ರಂಗೋಲಿ ಮನೆಮುಂದಿನ ಲಕ್ಷಣ ಅಂತ ಹಿರಿಯರು ಹೇಳುತ್ತಾರೆ. ಬೂತ ಪ್ರೇತಾದಿಗಳು ರಂಗೋಲಿಯ ದಾಟಿ ಮನೆಯೊಳಗೆ ಬರಲಾರವು ಅಂತ ಕೆಲವರ ನಂಬಿಕೆ, ರಂಗೋಲಿ ಸತ್ ಸಂಪ್ರದಾಯದ ಸದ್ ಗೃಹಿಣಿಯ ಲಕ್ಷಣ ಅಂತಲೂ ಹಳೇ ಜನ ಅಂತಾರೆ. ಇರಲಿ ಯಾವುದಾದರೂ ಕಣ್ಣಿಗೆ ಮುದನೀಡುವ ಮನಸೆಳೆಯುವ ತಾಕತ್ತು ರಂಗೋಲಿಗೆ ಇದೆ ಅನ್ನುವುದಂತೂ ಸತ್ಯ. ಯಾರದ್ದಾದರೂ ಮನೆಗೆ ಹೋದಾಗ ಮನೆಯ ಅಂಗಳದಲ್ಲಿರುವ ರಂಗೋಲಿ ಅರೆಕ್ಷಣ ನಿಮ್ಮ ಮನಸ್ಸನ್ನು ಸೆಳೆಯಿತು ಎಂದಾದರೆ ಆ ಮನೆಯೊಳಗೆ ಹೋದಾಗ ನಿಮ್ಮ ವರ್ತನೆ ಉಲ್ಲಾಸದಾಯಕವಾಗಿರುತ್ತದೆ ಎಂದು ಮೊನ್ನೆ ಹೊಸತಾಗಿ ಮತ್ತೊಬರು ಸೇರ್ಪಡೆಗೊಳಿಸಿ ಹೇಳಿದರು. ಮನೆಯ ಮುಂದಿನ ರಂಗೋಲಿಯನ್ನು ನೋಡಿ ಅಂದು ಆ ಮನೆಯ ಹೆಣ್ಣಿನ ಮನಸ್ಥಿತಿ ಹೇಗಿದೆ ಎಂದು ತಿಳಿಯಬಹುದು ಎಂದು ಮಗದೊಬ್ಬರು ಹೇಳಿದರಪ್ಪ. ಒಟ್ಟಿನಲ್ಲಿ ಎನೇ ಇರಲಿ ಹೆಂಗಳೆಯರ ಶ್ರದ್ಧಾಪೂರ್ವಕ ಕುಸರಿ ಕೆಲಸವಾದ ರಂಗೋಲಿ ತನ್ನಲ್ಲಿ ರಂ ಅಳವಡಿಸಿಕೊಂಡು ಒಂಥರಾ ಕಿಕ್ ಕೊಡುವುದಂತೂ ಸತ್ಯ.
1 comment:
ಸತ್ಯವಾದ ಮಾತು
Post a Comment