Tuesday, February 22, 2011

ಬ್ಲಾಗೇ ಬೇಡ ಬರೇ ಕಾಮೆಂಟೇ ಸಾಕು ಎನ್ನಿಸುವಷ್ಟು

ಏನಾಗುತ್ತೆ ಎಂದರೆ ಲೇಖನಕ್ಕಿಂತ ಕಾಮೆಂಟೇ ಸೂಪರ್ರಾಗಿರುತ್ತೆ , ಸಿನೆಮಾಗಿಂತ ಟೈಟಲ್ಲೇ ಚೆನ್ನಾಗಿರುತ್ತೆ, ಹುಡುಗಿಗಿಂತ ಡ್ರೆಸ್ಸೇ ಮಜವಾಗಿರುತ್ತೆ, ಹೀಗೆ ಇದು ಮುಂದುವರೆಯುತ್ತೇ,

ಹೀಗೆಲ್ಲಾ ಏಕೆ ಎಂದರೆ ನಾವು ಗಂಟೆಗಟ್ಟಲೆ ತಲೆ ಖರ್ಚು ಮಾಡಿ ಒಂದು ಬ್ಲಾಗು ಕುಟ್ಟುತ್ತೇವೆ, ಸಂಡಾಸು ಮನೆಯಲ್ಲಿ ಕುಂತಾಗಲೋ, ಇನ್ನೇನು ನಿದ್ರೆ ಹತ್ತಿತು ಎನ್ನುವಾಗಲೋ, ಹಲ್ಲಲ್ಲಿ ಅಡಗಿ ಕುಳಿತ ಸಾಸಿವೆ ಕಾಳನ್ನು ಕೀಳುವಾಗಲ ಮಂಡೆಯಲ್ಲಿ ಪಳಕ್ಕನೆ ಮಿಂಚುವ ಯೋಚನೆಯನ್ನು ಅಕ್ಷರರೂಪಕ್ಕೆ ಇಳಿಸಿ ಬ್ಲಾಗು ಕುಟ್ಟಿ ಉಸ್ ಎಂದು ನಿಟ್ಟುಸಿರು ಬಿಟ್ಟು ತಾಸಿನೊಳಗೆ ಮೂರ್ನಾಲ್ಕು ಸಾಲಿನ ಕಾಮೆಂಟು ನಮ್ಮ ಇಡೀ ಬ್ಲಾಗಿನ ಗಂಟೆಗಟ್ಟಲೆ ಕೊರೆದ ಸಾಲುಗಳ ಸಾರವನ್ನು ಹೀರಿ ಹೇಳಿಬಿಡುತ್ತೆ, ನನ್ನ ಹಿಂದಿನ ಪೋಸ್ಟ್ "ಹೋಗಲಿ ಬಿಡಿ ಮತ್ತೆ ಸಿಗೋಣ" ಕ್ಕೆ ಮೂರೇ ಮೂರು ಕಾಮೆಂಟು ಬಂದಿದೆ, ೧ ಹೊಸ್ಮನೆ ಮುತ್ತು ೨ ಮೃತ್ಯುಂಜಯ ಹೊಸ್ಮನೆ ೩ ರಮ್ಯಾ. ಅವು ಮೂರು ಓದಿದರೆ ನಾನು ಇಷ್ಟು ಬರೆಯಲು ಅಷ್ಟೆಲ್ಲಾ ಸಾಲುಗಳನ್ನು ಕುಟ್ಟಿದೆನಾ ? ಅನ್ನಿಸಿಬಿಡುವಷ್ಟು. ನಿಜವಾಗಿಯೂ ಬ್ಲಾಗೇ ಬೇಡ ಬರೇ ಕಾಮೆಂಟೇ ಸಾಕು ಎನ್ನಿಸುವಷ್ಟು,.

Muthu said...
ರಾಗಣ್ಣಾ....ದುಡ್ಡು ಎಂದರೆ ಶುದ್ಧ ಉಪ್ಪು.
ತುಸುವೇ ನಾಲಿಗೆ ಮೇಲಿಟ್ಟು ಕೊಂಡರೆ
ರುಚಿ. ಹೆಚ್ಚಾಗಿ ತಿಂದರೆ ದಾಹ.ಇದು
ಕಾರಂತಜ್ಜನ ಮಾತೋ
Mruthyunjaya.H said...
ತಮ್ಮಲ್ಲಿ ಜ್ಞಾನವಿಲ್ಲ ಎಂದು ಕೊರಗುವವರು ಕಡಿಮೆ.ತಮ್ಮಲ್ಲಿ ಹೃದಯವಂತಿಕೆಯಿಲ್ಲ ಎಂದು ಕೊರಗುವವರು ಇನ್ನೂ ಕಡಿಮೆ.ಹಣವಿಲ್ಲ ಎಂದು ಕೊರಗುತ್ತಿರುವವರಿಗೆ ಹಣ ಸಿಕ್ಕ ಕೂಡಲೇ ಅದನ್ನು ಜಗಜ್ಜಾಹೀರು ಮಾಡಿಕೊಳ್ಳುವ ತವಕ. ಯಾಕೆಂದರೆ ಅವರ ಬಳಿ ಈಗಲೂ ಈಗಲೂ ಏನೂ ಇಲ್ಲ ಹಣದ ಹೊರತಾಗಿ!
ಮತ್ತೆ ನಾನು ರವಿಬೆಳೆಗೆರೆಯವರನ್ನು ಎಂದೂ ಓದಿಲ್ಲ!
Ramya said...
Hey Raghu mava, good story I had to open my Fully loaded Laptop and connect to home interenet to read ur article, by that time my Microwave oven had cooke food it was beeping, since it was very hot I had to switch on AC still I dint give up I was reading ur article and my Hubs came by then tired by traffice bcoz of his Big CAR :) Henge!!!!

3 comments:

ಶಿವಶಂಕರ ವಿಷ್ಣು ಯಳವತ್ತಿ said...

ಅದಕ್ಕೆ ನನ್ನ ಬ್ಲಾಗನ್ನು ಕಮೆಂಟಿನ ಹಂಗಿಲ್ಲದ ಬ್ಲಾಗ್ ಮಾಡಿದ್ದೇನೆ..


-ಯಳವತ್ತಿ

nimmolagobba said...

ಬ್ಲಾಗಿನ ಒಳ್ಳೆ ಬರಹಕ್ಕೆ ಕಾಮೆಂಟ್ ಮಾಡಲು ಯಾಕೆ ಖಂಜೂಸ್ ತನ ಮಾಡ್ತಾರೋ ಗೊತ್ತಿಲ್ಲ.ಅಥವಾ ಕಾಮೆಂಟ್ ಮಾಡಲು ಪಂಗಡಗಳು ಇದೆಯೇ ಗೊತ್ತಿಲ್ಲಾ .ಕೆಲವರ ಕೆಟ್ಟ ಬರಹಗಳಿಗೆ ಆಹಾ .ಓಹೋ, ಅನ್ನುವ ಬೋಪರಾಕ್ ಹಾಕುವ ಕೆಲ ಬ್ಲಾಗಿಗರು ,ಉತ್ತಮವಾಗಿ ಬರೆಯುವ ಹಲವು ಬ್ಲಾಗುಗಳನ್ನು ಕಣ್ಣೆತ್ತಿಯೂ ನೋಡುವುದಿಲ್ಲ.ಇದಕ್ಕೆ ಅಪವಾದವಾಗಿ ಹಲವು ಬ್ಲಾಗಿಗರು ಯಾವುದೇ ಹೊಸ ಬ್ಲಾಗನ್ನು ಬೆಂಬಲಿಸಿ , ಬ್ಲಾಗಿನಲ್ಲಿ ಬರೆಯಲು ಪ್ರೋತ್ಸಾಹಿಸುವ ಹೃದಯ ಹೊಂದಿದ್ದಾರೆ..ಆದರೂ ಬರಹ ನಮ್ಮ ಆತ್ಮ ಸಂತೋಷಕ್ಕೆ ಹೊರತು ಕಾಮೆಂಟ್ ಗಾಗಿ ಅಲ್ಲ .ಹಾಡು ಹಕ್ಕಿಗೆ ಬೇಕೇ ಬಿರುದು ಸನ್ಮಾನ................!!!!!


--
ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

ಸೀತಾರಾಮ. ಕೆ. / SITARAM.K said...

ನನ್ನ ಮಾತು ಬಾಲು ಹೇಳಿದ್ದಾರೆ.