ಪ್ರಿಯ ಓದುಗರೇ,
ಹಿಂದೆ ಯಾವುದೋ ಒಂದು ಪೋಸ್ಟ್ ನಲ್ಲಿ ನಾನು ಹಲುಬಿದ್ದೆ, ವಿಜಯಕರ್ನಾಟಕಕ್ಕೆ ನಾನು ಬರೆದ ಲೇಖನಕ್ಕೆ ಸರಿ ಸುಮಾರು ೧೨ ಸಾವಿರ ಸಂಭಾವನೆಯನ್ನೇ ಕಳುಹಿಸಿಲ್ಲ, ಮೈಲ್ ಮಾಡಿದರೂ ಉತ್ತರವಿಲ್ಲ ಹಾಗೆ ಹೀಗೆ ಲೊಂಗೆ ಲೊಟ್ಟೆ ಎಂದೆಲ್ಲಾ. ಮೈಲ್ ಮಾಡಿಲ್ಲವಾದರೂ ೪೩೫೦ ರೂಗಳ ಚೆಕ್ ಕಳುಹಿಸಿದ್ದಾರೆ. ಧನ್ಯವಾದ ಅವರಿಗೆ. ಈಗ ಅನ್ನಿಸುತ್ತೆ ಬ್ಲಾಗ್ ಬರೆಯಬಾರದಿತ್ತು(ನೋಡು ಹಣ ಎಂದ ಕೂಡಲೇ ದನಿಯೇ ಬದಲಾಯಿತು ಎಂದಿರಾ...? ಒಕೆ ಇರ್ಲಿ ಬಿಡಿ) ಆದರೂ ಬರೆದಾಯಿತಲ್ಲ ಹೋಗಲಿ ಬಿಡಿ. ಈಗ ನೇರ ವಿಷಯಕ್ಕೆ ಬರೋಣ. ಈಗ ಐದು ನೂರು ರೂಪಾಯಿಗಳ ಬಹುಮಾನವಿರುವ ಒಂದು ಸಣ್ಣ ಸ್ಪರ್ಧೆ ಈ ನನ್ನ ಬ್ಲಾಗ್ ಓದುಗರಿಗೆ. ನೀವು ಮಾಡಬೇಕಾದ್ದು ಇಷ್ಟೆ. ಕನ್ನಡದ ಯಾವ್ ಬ್ಲಾಗ್ ನಿಮಗೆ ಅತ್ಯಂತ ಇಷ್ಟವಾಯಿತು? ಕಾರಣವೇನು?
ಚಿಕ್ಕದಾದ ಚೊಕ್ಕದಾದ ಇಷ್ಟವಾದ ಬ್ಲಾಗ್ ಹಾಗೂ ಕೊಡುವ ಕಾರಣದ ಮೇಲೆ ತೀರ್ಪು. ತೀರ್ಪುಗಾರ ನಾನಲ್ಲ. ಬಹುಮಾನ ನಿಮ್ಮ ಅಕೌಂಟ್ಗೆ ಬಂದು ಬೀಳುತ್ತದೆ. ಶುರು ಹಚ್ಕೊಳ್ಳಿ..... (ಈ ತಿಂಗಳಾಂತ್ಯ ಗಡವು) ಮೈಲ್ ಮೂಲಕವೂ ತಿಳಿಸಬಹುದು (shreeshum@gmail.com)
2 comments:
ಇಂತವರ ಬ್ಲಾಗ್, ನಿಮ್ಮ ಬ್ಲಾಗ್ ಅಂತ ಸುಮ್ ಸುಮ್ಮನೆ ದುಡ್ಡಿಗೋಸ್ಕರ ಏನೇನೋ ಹೇಳೋಲ್ಲ, ನಿಮಗೆ ನೇರವಾಗಿ ನನ್ನ ಬ್ಯಾಂಕ್ ಅಕೌಂಟ್ ನಂಬರ್ ಕಳಿಸಿಬಿಡ್ತೀನಿ ;P
he he
Post a Comment