Saturday, October 15, 2011

ತೀರಾ ಅರ್ಥವಾಗದಿದ್ದರೆ ತಲೆಕೆಡಿಸಿಕೊಳ್ಳಬೇಡಿ, ಅರ್ಥವಾಗುವವರಿಗೆ ಆಗಿರುತ್ತದೆ



ಬದುಕು ಎಂಬುದು ನಂಬಿಕೆಯ ಮೇಲೆಯೇ ನಿಂತಿದೆ. ನಾನು ನೀವು ನಂಬಿದ್ದನ್ನು ನಂಬದೇ ಇರಬಹುದು ನೀವು ನಾನು ನಂಬಿದ್ದನ್ನು ನಂಬದೇ ಇರಬಹುದು. ಆದರೆ ನಾನೂ ನಂಬಿರುತ್ತೇನೆ, ನೀವೂ ನಂಬಿರುತ್ತೀರಿ. ದೇವರು ಇದ್ದಾನೆ ಎಂದು ನಂಬಿ ಜೀವನ ನಡೆಸುವರು ಒಂದೆಡೆ, ಇಲ್ಲ ಎಂದು ನಂಬಿ ನಡೆಯುವವರು ಮತ್ತೊಂದೆಡೆ. ಇಬ್ಬರದ್ದೂ ನಂಬಿಕೆಯಷ್ಟೇ ಎಂಬುದು ಮತ್ತೊಂದು ನಂಬಿಕೆ. ಇರಲಿ ಅದು ತೀರಾ ಗೊಂದಲದ ವಿಚಾರ. ಹಾಗಾಗಿ ಅದನ್ನ ಅಲ್ಲಿಗೆ ಬಿಟ್ಟು ನಾನು ನಂಬಿದ ವಿಚಾರಕ್ಕೆ ಬರೋಣ.

ಈ ಬ್ಲಾಗಿನ ಕೆಳಗಡೆ ಕಾಣಿಸುವ ನಮ್ಮ ಮನೆಯ ಎದುರು ಒಂದು ಯಕ್ಷಿಬಣ್ಣವಿದೆ. ಅದು ಈ ಬರಹದ ಮೇಲ್ಗಡೆಯಿದೆ. ಅದು ನಮ್ಮ ಕುಟುಂಬದ ನೆಂಟರಿಷ್ಟರ ಆರಾಧ್ಯ ಧೈವ. ಮೊದಮೊದಲು ಅದು ಮದುವೆ ಆಭರಣ ಕೊಡುತ್ತಿತ್ತು ಎಂಬಂತಹ ದಂತಕಥೆಗಳು ಆಗಾಗ ಅವರಿವರ ಬಾಯಲ್ಲಿ ಹರಿದಾಡುತ್ತಿದೆ. ಅಕ್ಕಪಕ್ಕದ ಮನೆಯವರೂ ಅದಕ್ಕೊಂದು ಹಣ್ಣುಕಾಯಿ ಪೂಜೆ ಪುನಸ್ಕಾರ ಮಾಡುತ್ತಾರೆ. ಊರವರೂ ತೀರಾ ಕುತ್ತಿಗೆಗೆ ಸಮಸ್ಯೆ ಬಂದಾಗ ಓಡೋಡಿ ಬಂದು ಒಂದು ಕಾಯಿ ಒಡೆಸುವುದು ಇದೆ.

ಇಂತೆಂಬ ಯಕ್ಷಿಬಣ್ಣ ಈಗ ಜೀರ್ಣವಾಗಿದೆ. ಅದರ ಜೀರ್ಣೋದ್ಧಾರಕೆಲಸ ಶುರುವಾಗಿದೆ. ಅಕ್ಕ ಅಣ್ಣ ಇಂಜನಿಯರ್ ರಮ್ಯಾ, ರಾಜೇಶ್, ವಿಜಯ ಕಾಲೇಜ್ ಪ್ರೊಫೇಸರ್ ಬಾವ ಅಕ್ಕ , ದುಬೈ ಅಕ್ಕ ಬಾವ, ಅಕ್ಕಯ್ಯ ಬಾವ , ಸತ್ಯ, ಕಾರ್ತೀಕ, ಶ್ರೀವತ್ಸ, ರಂಜನ, ಕಾವ್ಯ -ನವ್ಯ, ಕತಾರ್ ಮಂಜು ಕತಾರ್ ನಾಣು, ಅಮ್ಮಾ ಹೀಗೆ ಭಕ್ತರ ದಂಡನ್ನೇ ಹೊತ್ತಿರುವ ಆಕೆಗೆ ಇದೇನು ಮಹಾ ಅಲ್ಲವೇ?

ಅರ್ಥವಾಯಿತಲ್ಲ ಇಷ್ಟೊಂದು ದಂಡು ಇಟಕೊಂಡು ಕೆಲಸ ಮಾಡಿಸುವ ನಾನು ಧರ್ಮದರ್ಶಿ....!. ಎಂಬಲ್ಲಿಗೆ ಯಕ್ಷಿ ಜೀರ್ಣೋದ್ಧಾರ ಬ್ಲಾಗ್ ಮುಕ್ತಾಯವೂ.


2 comments:

ಮೌನರಾಗ said...

ಕೊನೆಯ ಪಾರ ಅರ್ಥವಾಗಲಿಲ್ಲ...ನೀವು ತಲೆಕೆಡಿಸಿಕ್ಕೊಳ್ಳಬೇಡಿ ಎಂದರೂ ಸಾದ್ಯವಿಲ್ಲ...
ನಮ್ಮೂರಿನಲ್ಲೂ ಈ ಥರದ್ದೇ ಒಂದು ದಂತಕತೆಯ ಕಲ್ಲು,ಕೊಳ ಇದೆ...ಇಷ್ಟರ ತನಕ ನಮ್ಮೂರಿನಲ್ಲಿ ಮಾತ್ರ ಇತ್ತೇನೋ ಇದು ಅಂದುಕ್ಕೊಂಡಿದ್ದೆ...ಬಹುಶಃ ಊರಿಗೊಂದು ಯಕ್ಷ -ಯಕ್ಷಿನಿಯರು ಇದ್ದರೇನೋ..!

RK Rajarama said...

ತುಂಬಾ ಒಳ್ಳೆಯ ಕೆಲಸ. ಶುಭಸ್ಯ ಶೀಘ್ರಂ. ಅದೇ ಒರಿಜಿನಲ್ ಲುಕ್ ಇರಲಿ