Tuesday, January 13, 2009

ಭೀಮೇಶ್ವರ ಮತ್ತು ನೋವಿನೆಣ್ಣೆ


ಭೀಮೇಶ್ವರ ಎಂಬ ಹೆಸರಿನ ಈ ಜಾಗ ಕಾರ್ಗಲ್ ಮತ್ತು ಭಟ್ಕಳ ರಸ್ತೆಯಲ್ಲಿ ೩ಕಿಲೋ ಮೀಟರ್ ಒಳಗಡೆ ಇದೆ. ಕಡಿದಾದ ಮಣ್ಣು ರಸ್ತೆಯಲ್ಲಿ ವಾಹನ ಇಳಿಸಿ ಸಾಗಿದರೆ ರೋಮಾಂಚನ ಇಲ್ಲಿ ಉಚಿತ. ಕಲ್ಲಿನಿಂದ ನಿರ್ಮಾಣವಾದ ದೇವಸ್ಥಾನ ನೋಡಿದ ಮೇಲೆನೆಮ್ಮದಿ ಖಚಿತ. ಜುಳುಜುಳು ನೀರು ಬೀಳುವ ಜಾಗದಲ್ಲಿ ತಲೆಯೊಡ್ಡಿನಿಂತರೆ ಆಹಾ ಅನ್ನಬಹುದು. ಅಲ್ಲಿಯೇ ಮೆಟ್ಟಿಲಮೇಲೆ ನಿಂತು ಓಹೋ ಎಂದರೆ ಮರುಧ್ವನಿ ಮರುಕ್ಷಣ ಓಹೋ. ವಸತಿಗೆ ವ್ಯವಸ್ಥೆ ಅಲ್ಲಿಲ್ಲ. ಹಸಿವೆ ತೀರಲು
ಒಂದಿಷ್ಟು ಊಟ ಕಟ್ಟಿಸಿಕೊಂಡು ಹೋಗಬೇಕಾದ ಪ್ರಮೇಯವಿದೆ. ದೇವಸ್ಥಾನದ ಪೂಜಾರಿಯ ಬಳಿ ಬೇಕಷ್ಟೇ ಮಾತನಾಡಿದರೆ ಬಚಾವ್. ಇಲ್ಲದಿದ್ದರೆ ಆತ ನಮ್ಮ ವೈಯಕ್ತಿಕ ಸಮಸ್ಯೆ ಬಗೆಹರಿಸಲುನಿಲ್ಲುತ್ತಾನೆ. ಮತ್ತು ಒಂದಿಷ್ಟು ಹಣ ಖರ್ಚು ಮಾಡಿಸಿ ಪೂಜೆ ಮಾಡಿಸುತ್ತಾನೆ. ಸೊಂಟ ನೋವಿಗೆ ಎಣ್ಣೆ ಕೊಡುತ್ತೀನಿ ಅನ್ನುತ್ತಾನೆ. ಹಾಗಾಗಿ ಎಚ್ಚರ ಅವಶ್ಯ. ಇವಿಷ್ಟು ಮುನ್ನೆಚ್ಚರಿಕೆ ಪಾಲಿಸಿದರೆ ಸೂಪರ್ ಜಾಗ. ಅಲ್ಲಿಂದ ಹದಿನೈದು ಕಿಲೋಮೀಟರ್ ದೂರದಲ್ಲಿ ಕಾನೂರು ಕೋಟೆಯಿದೆ........
ಸರಿ ಸುಮಾರಾಗಿ ಇಂತಿಪ್ಪ ನೂರಾರು ಪ್ರೇಕ್ಷಣೀಯ ಸ್ಥಳಗಳ ನಿಖಿರ ಮಾಹಿತಿಯನ್ನು ಹೊಂದಿದ ಆ ವ್ಯಕ್ತಿ ನನಗೆ ಜೋಗದಲ್ಲಿ ಒಂದು ತಾಸು ಮಾತನಾಡಲು ಸಿಕ್ಕಿದ್ದ. ಆತನದ್ದು ಸ್ಪೈನ್ ದೇಶವಂತೆ. ನಾನಂತೂ ಅದನ್ನು ನೋಡಿಲ್ಲ. ಅವನು ಹೇಳಿದ್ದಷ್ಟನ್ನ ಕೇಳಿದೆ. ನಾನು ನನಗೆ ತಿಳಿದದ್ದನ್ನು ಹೇಳಿದೆ.
ಈ ಘಟನೆ ನಡೆದು ಆರು ತಿಂಗಳ ನಂತರ ನನಗೆ ಭೀಮೆಶ್ವರಕ್ಕೆ ಹೋಗುವ ಅವಕಾಶಬಂತು. ನಾವು ನಾಲ್ಕೈದುಜನ ಸುಮೋದಲ್ಲಿ ದೇವಸ್ಥಾನ ತಲುಪಿದೆವು. ದೇವಸ್ಥಾನದಲ್ಲಿ ಪೂಜೆ ಮುಗಿಸಿ ಹೊರಡಲನುವಾದಾಗ ಪೂಜಾರಿ ನಮ್ಮ ಜತೆಯಲ್ಲಿದ್ದ ಮಹಿಳೆಯೊಬ್ಬರ ಬಳಿ ನಿಮಗೆ ಕೀಲುನೋವು ಇರಬೇಕಲ್ಲ...!. ಎಂಬ ಪ್ರಶ್ನೆ ಎಸೆದ. ಆಕೆ ದಂಗಾಗಿಬಿಟ್ಟಳು. ಆಕೆಗೆ ಮಂಡಿನೋವು ಬಾಧಿಸುತ್ತಿದ್ದುದು ನಿಜವಾಗಿತ್ತು. ಪೂಜಾರಿ ಮರುಕ್ಷಣ ಮತ್ತೊಂದು ವಿಶೇಷ ಪೂಜೆ ಮಾಡಿಸಿ ಮುನ್ನೂರು ರೂಪಾಯಿ ವಸೂಲಿ ಮಾಡಿಕೊಂಡ. ನನಗೆ ಸ್ಪೈನ್ ದೇಶದವನ ಮಾಹಿತಿ ನೆನಪಾಯಿತು ಹಾಗೂ ನಾನು ಅದನ್ನು ಹೇಳಿದರೂ ಆಕೆ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಪಾಪ ಆಕೆಯ ಮಂಡಿನೋವು ಹಾಗೆ ನಂಬುದಂತೆ ಮಾಡಿತ್ತು. ಮತ್ತು ಪೂಜಾರಿ ಒಂದು ಬಾಟಲಿಯಲ್ಲಿ ನೋವಿನೆಣ್ಣೆಯನ್ನೂ ನೀಡಿದ.
ಇಂತಹ ಮಾಹಿತಿಯನ್ನು ಕಂಕುಳಲ್ಲಿ ಇಟ್ಟುಕೊಂಡು ನಮ್ಮ ದೇಶ ಸುತ್ತುವ ವಿದೇಶಿಗರೂ , ನಮ್ಮನಡುವೆಯೇ ಇದ್ದು ಇಂತಹ ಮಾಹಿತಿಗೆ ಆಹಾರವಾಗುವ ಜನರೂ ಹಾಗೂ ನಮ್ಮ ಸುತ್ತಮುತ್ತಲೇ ಏನಿದೆ ? ಅಂತ ಗೊತ್ತಿಲ್ಲದ ನಮ್ಮಜನರೂ ಎಲ್ಲವೂ ನೆನಪಾಯಿತು.ಇದಕ್ಕಿಂತ ಹೆಚ್ಚಿನ ಅನುಭವ ನಿಮ್ಮದಿರಬಹುದು.ಅವುಗಳ ನಡುವೆ ಇದೂ ಒಂದು.

4 comments:

Ashok Uchangi said...

ಪ್ರಿಯರೇ
ಭೀಮೇಶ್ವರ ಹೋಗುವ ಪ್ಲಾನ್ ಇದೆ.ನಿಮ್ಮ ಎಚ್ಚರಿಕೆ ನಮಗಂತೂ ಮೆಚ್ಚುಗೆಯಾಯಿತು.ಪ್ರವಾಸಿ ಸ್ಥಳಗಳಲ್ಲಿ ಈ ರೀತಿಯ ದಂಧೆ ಇತ್ತೀಚೆಗೆ ಅತಿ ಆಗುತ್ತಿದೆ.
ಅಶೋಕ ಉಚ್ಚಂಗಿ
http://mysoremallige01.blogspot.com/

prasca said...

ಓಹ್ ಶರ್ಮ ಸಾರ್,
ನಾವು ಹೋಗಿದ್ದಾಗ ಆತ ಇಲ್ದೆ ಇದ್ದದ್ದು ಒಳ್ಳೆದಾಯ್ತ ಅಂತ?

shreeshum said...

ಅಶೋಕ್
ನಿಜ ಅವುಗಳನ್ನೆಲ್ಲಾಹೇಗಿದೆಯೋ ಹಾಗೆ ಒಪ್ಪಿಕೊಳ್ಳುವುದಷ್ಟೇ ನಮ್ಮಿಂದಾಗುವುದು.

ಪ್ರಸನ್ನ.
ಹ ಹ ಹ ಹೌದು

ಚಿತ್ರಾ ಕರ್ಕೇರಾ said...

ಒಳ್ಳೆಯ ಮಾಹಿತಿ ಸರ್.
-ಚಿತ್ರಾ