Thursday, January 20, 2011

ಈ ಕೊಡ ಬೋಳಿಮಗಂಗೆ ಏನಾಗಿತ್ತು ?

ಕಳೆದ ಕೆಲ ದಿವಸಗಳಿಂದ ಒಂದಿಷ್ಟು ಪತ್ರಕರ್ತರು ಅಕ್ಷರ ಯುದ್ಧವನ್ನು ಸಾರಿಯಾಗಿದೆ. ವಿಜಯಕರ್ನಾಟಕದಿಂದ ಹೊರ ಹೊರಟ ಭಟ್ರ ಟೀಂ ವರ್ಸಸ್ ರವಿಬೆಳಗೆರೆ ಅಂತ ಹೊಸತಾಗಿ ನಾನೇನು ಹೇಳಬೇಕಾಗಿಲ್ಲ. ಹೀಗೆ ಯುದ್ಧ ನಡೆಸುತ್ತಿರುವ ಅಕ್ಷರ ಸಾಧಕರ ವೈಖರಿ ನೋಡಿ ಓದುಗ ಬೆಕ್ಕಸಬೆರಗಾಗಿದ್ದಾನೆ. ಇವರೊಡನೆ ಸಾಥ್ ನೀಡಲು ಸಂಪಾದಕೀಯ ಹಾಗೂ ವಿಮರ್ಶಕಿ ಎಂಬ ಬ್ಲಾಗ್ ಗಳೂ ನಿಂತಿವೆ. ಹೀಗೆ ವಾರ್ ನಡೆಸುತ್ತಿರುವ ಬರಹಗಳು ಸಿಕ್ಕಾಪಟ್ಟೆ ಸ್ಟ್ರಾಂಗ್. ಅದೆಷ್ಟು ಸ್ಟಾಂಗ್ ಎಂದರೆ ನಮ್ಮನಿಮ್ಮಂತಹ ಬಡಪಾಯಿ ಬರಹಗಾರರೂ ಕಂ ಓದುಗರೂ ಬೆಚ್ಚಿಬೀಳುವಷ್ಟು. ಕಾರಣ ಯಾರ ಬರಹವನ್ನು ಓದುವಾಗಲೂ ಇವರು ಮಾತ್ರಾ ಸರಿ ಎಂಬ ಭಾವನೆಯನ್ನು ಮೂಡಿಸುತ್ತಾರೆ. ಅದು ಸರಿ ಬಿಡಿ ಎಲ್ಲರೂ ಅಕ್ಷರ ತಿಂದು ಪದಗಳ ಹೊರಡಿಸಿ ಸದ್ದು ಮಾಡುತ್ತಲೇ ಬಂದವರು. ಹಾಗಾಗಿ ಏನು? ಎತ್ತ? ? ಯಾಕಾಗಿ ? ಎಂದು ಕೊನೆಯವರೆಗೂ ಅರ್ಥವಾಗುವುದೇ ಇಲ್ಲ. ಹೋಗಲಿ ಬಿಡ ಅರ್ಥವಾಗದಿದ್ದರೆ ಕತ್ತೆ ಬಾಲ ಕುದುರೆಜುಟ್ಟು ಅಂತ ಅಂದುಕೊಂಡು ಬಿಟ್ಟಾಕಿಬಿಡೋಣ. ನಮ್ಮಲ್ಲಿ ಒಂದು ಮಾತಿದೆ " ಆ ಕೊಡ ಬೋಳಿಮಗಂಗೆ ಏನಾಗಿತ್ತು? " ಅಂತ. ಅದರ ಕತೆ ಇಷ್ಟೆ. ಊರಲ್ಲಿ ಎರಡು ಮನೆ ಒಬ್ಬಾತ ದೇಹಿ ಅಂತ ಬಂದವರಿಗೆ ಇಲ್ಲ ಎನ್ನದೆ ಕೈಬಿಚ್ಚಿ ದಾನ ಮಾಡುತ್ತಿದ್ದ ಮತ್ತೊಬ್ಬಾತ ಎಂಜಲು ಕೈಯಲ್ಲಿ ಕಾಗೆ ಓಡಿಸುತ್ತಿರಲಿಲ್ಲ. ಹಾಗಾಗಿ ಎಲ್ಲರೂ ಮೊದಲನೆಯವನ ಮನೆಗೆ ಹೋಗಿ ಬೇಡಿ ಎರಡನೆಯವನ ಮನೆಯತ್ತ ತಿರುಗಿನೋಡದೆಯೇ ಮುಂದೆ ಹೋಗುತ್ತಿದ್ದರು. ಒಂದು ಸಲ ದಾನಿಗೆ ಏನೋ ತೊಂದರೆಯಾಗಿ ಆ ವರ್ಷ ಬಂದವರಿಗೆ ಇಲ್ಲ ಎಂದ . ಸರಿ ಆವಾಗ ಶುರುವಾಗಿದ್ದೇ "ಈ ಕೊಡ ಬೋಳಿಮಗಂಗೆ ಏನಾಗಿತ್ತು ? ಎಂಬ ಉದ್ಘಾರ. ಪಾಪ ಅಷ್ಟು ವರ್ಷ ದಾನ ಮಾಡಿದ್ದಕ್ಕೆ ಈ ಪ್ರತಿಫಲ ದಾನಿಗೆ. ಆತ ನಿರುಮ್ಮಳವಾಗಿ ಇದ್ದ ಬೈಗಳವಿಲ್ಲದೆ. ಅಯ್ಯೋ ಈ ಕತೆಗೂ ಅಕ್ಷರ ಜಗಳಕ್ಕೂ ಎತ್ತಣದೆತ್ತಣ ಸಂಬಂಧ ಎಂದಿರಾ? ನನಗೂ ಗೊಂದಲ ಇದೆ ಕಣ್ರಿ..... ಆದ್ರೂ ರವಿ ಬೆಳೆಗೆರೆ ಇರೋದೆ ಅದಕ್ಕೆ ಇವರಿಗೇನಾಗಿದೆ? ಅಂತ ಒಂದು ಕ್ಲ್ಯೂ ಅಷ್ಟೆ.

1 comment:

Muthu said...

ಇತ್ತೀಚಿಗೆ ನಾನು ಗಮನಿಸಿದ ಕೆಲವು ವಿಚಾರವೆಂದರೆ; ಇಂದಿನ ಕೆಲವು ಸುದ್ದಿ ಪತ್ರಿಕೆಗಳಲ್ಲಿ ಸಾರ್ವಜನಿಕ ಹಾಗು
ಸಾಮೂಹಿಕ ಸುದ್ದಿಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಡದಿರುವುದು. ಸಮಷ್ಟಿ ಹಿತವನ್ನು ಎಣಿಸದೆ, ಕೇವಲ ವ್ಯಕ್ತಿಯ ಖಾಸಗಿ ಬದುಕಿಗೆ
ದುರ್ಬೀನು ಹಿಡಿದು ನಿಂತಿರುವುದು ಎಷ್ಟು ಸರಿ. ಇದೆಲ್ಲ ಗಮನಿಸಿದಾಗ ಇಂದಿನ ಸುದ್ದಿ ಮಾಧ್ಯಮಗಳು ಜವಾಬ್ಧಾರಿ ಹಾಗು ಕರ್ತವ್ಯದಿಂದ ನಿಧಾನವಾಗಿ ಪಲ್ಲಟವಾಗುತ್ತಿರುವುದು ಡಾಳಾಗಿ ಕಣ್ಣಿಗೆ ರಾಚುತ್ತಿರುವುದು ಸುಳ್ಳಲ್ಲ.

ಒಂದೂ ಭರದಿಂದ ಬೀಸುತ್ತಿರುವ, ಬದಲಾಗುತ್ತಿರುವ ಮಾಹಿತಿ ತಂತ್ರ ಜ್ಞಾನವನ್ನು ಸರಿಯಾಗಿ ಗ್ರಹಿಸುವ ಹಾಗು ಪ್ರಯೋಜನ
ಪಡೆದುಕೊಳ್ಳುವಲ್ಲಿ ವಿಪಲವಾಗುವುದು ಇನ್ನೊದು ಸುದ್ದಿ ಸಂಗ್ರಹಿಸುವಲ್ಲಿ ಸೋಲು. ಇವೆಲ್ಲಾ ಅನುಮಾನಗಳು ಏಕೆಂದರೆ...!?
ಒಬ್ಬ ನೌಕರ ಒಂದು ಸಂಸ್ಥೆಯಿಂದ ಮತ್ತೊಂದು ಸಂಸ್ಥೆಗೆ ತನ್ನ ವೃತ್ತಿಯನ್ನು ಬದಲಾಯಿಸಿಕೊಂಡರೆ,ಯಾಕಿಷ್ಟು ತೊಳಲಾಟ. ಮಂಗನ ಚುಂಗು (ನಸುಗುನ್ನಿ ಪುಡಿ) ಪೂಸಿಕೊಂಡಂತೆ ಆಡುವವ ತನ್ನ ಕುರು, ಅದರ ಕೀವನ್ನ ವಾರದ ಅಚ್ಚರಿ ಎಂದು ಎಲ್ಲರಿಗೂ ಪ್ರಸಾದವೆಂಬಂತೆ ಹಂಚುವ ಹಪಾಹಪಿ ಈಗೇಕೋ..?
ಹಾಗಂತ... ಯಾರೊಬ್ಬರಾದರೂ ಅಜನ್ಮ ಪರ್ಯಂತ ಒಂದೇ ಸಂಸ್ಥೆಗೆ, ವ್ಯಕ್ತಿಗೆ ನಿಷ್ಟೆ ಇಂದ ಇರಬೇಕೆಂಬ
ಶಾಸನವಂತೂ ಇಲ್ಲವಲ್ಲ. ಹೊತ್ತಿ ಉರಿಯುತ್ತಿರುವ ಸಾಮಾಜಿಕ ಸಮಸ್ಯೆಗಳು, ಕುಲಗೆಟ್ಟ ರಾಜಕೀಯದ ವಿಚಾರಗಳೇ ಹಾಸಲಿಕ್ಕು, ಹೊದೆಯಲಿಕ್ಕು ಅಗುವಷ್ಟಿವೆ. ಹೀಗಿರುವಾಗ ಕೆಲ ಪತ್ರಿಕೆಗಳು ತಮ್ಮ ಪುಟಗಳನ್ನೂ, ಮಸಿಯನ್ನು ಇದಕ್ಕೆ ಖರ್ಚು ಮಾಡಿ ಗುಡ್ಡೆ ಹಾಕಿದ್ದೇನೋ..! ಬೇಕೋ.. ಬೇಡವೋ.. ಕೊಂಡ ತಪ್ಪಿಗೆ ಓದಿ ಮುಗಿಸುವುದಷ್ಟೇ ನಮ್ಮ ಕರ್ಮ.
ದುರಂತವೆಂದರೆ ಕೆಲ ಬರಹಗಾರರಿಗೆ ಯಾವತ್ತಿಗೂ ಸಮಾಧಾನಿ, ವಾಸ್ತವಿಕ ನೆಲಗಟ್ಟಿನ ಮೇಲೆ ಸಮಚಿತ್ತದಲ್ಲಿ ವ್ಯವಹರಿಸುವ ಜಾಣ್ಮೆ ಬರದೇ ಹೋಗುವಂತದ್ದು.