Thursday, January 20, 2011

ಹಣವೂ ಇಲ್ಲ ಗುಣವೂ ಇಲ್ಲ.

ನಾನು ಒಂದಿಷ್ಟು ಬರೆಯುತ್ತೇನೆ. ಸನ್ ಸಾವಿರದ ಒಂಬೈನೂರಾ ಎಂಬತ್ನಾಲ್ಕನೆ ಇಸವಿಯಿಂದ ಬರೆದು ಬರೆದು ಗುಡ್ಡೆ ಹಾಕಿದ್ದಿದೆ. ಪ್ರಜಾವಾಣಿ ದಿನಪತ್ರಿಕೆ ಹಾಗೂ ಕರ್ಮವೀರ ವಾರಪತ್ರಿಕೆ ಅಂದಿನಿಂದ ನನ್ನ ಬರಹಗಳನ್ನು ಪ್ರಕಟಿಸಿದ ಪತ್ರಿಕೆಗಳು. ಕನ್ನಡದ ವಾರಪತ್ರಿಕೆ ಕರ್ಮವೀರದೊಡನೆ ನನಗೆ ಸರಿ ಸುಮಾರು ೨೫ ವರ್ಷದ ಅನುಬಂಧ. ಆದರೆ ವಿಪರ್ಯಾಸವೆಂದರೆ ನನಗೆ ಇಲ್ಲಿಯವರೆಗೆ ಯಾರೂ ಮುಖತ: ಪರಿಚಯ ಇಲ್ಲ. ಆದರೆ ಅಲ್ಲಿಗೆ ಕತೆ ಹಾಸ್ಯ ಲೇಖನ ಗಳನ್ನು ಕಳುಹಿಸಲು ನನಗೆ ತುಂಬಾ ಒಲವು. ಕಾರಣ ಅವರು ಡೆಸ್ಕ್ ನಲ್ಲಿ ಯಾರೇ ಇರಲಿ ಎಲ್ಲರಿಗೂ ಸ್ಪಂದಿಸುತ್ತಾರೆ ಅಥವಾ ನನಗೆ ಸ್ಪಂದಿಸಿದ್ದಾರೆ. "ನಿಮ್ಮ ಬರಹ ಸ್ವೀಕಾರ ವಾಗಿದೆ " ಎಂಬ ಒಂದು ಕಾರ್ಡ್ ಹಾಕುತ್ತಾರೆ. ನಂತರ ಒಂದು ಪ್ರತಿ ಕಳುಹಿಸುತ್ತಾರೆ ಹಾಗೆಯೇ ಹಿಂದಿನಿಂದಲೇ ಬಡ ಬರಹಗಾರರ ನೆಚ್ಚಿನ ಐಟಂ...! ಚೆಕ್ ಬಂದೇಬಿಡುತ್ತದೆ. ಅಲ್ಲಿಗೆ ಮತ್ತೆ ಬರೆಯಲು ಶುರು.
ಇನ್ನು ಪ್ರಜಾವಾಣಿಗೆ ಕಳುಹಿಸುವ ಕೆಲಸದ ಜತೆ ಪ್ರಕಟವಾಗಿದೆಯೋ ಇಲ್ಲವೋ ಅಂತ ನೋಡುತ್ತಾ ಕೂರುವುದು ಬರೆದವನ ಕೆಲಸ. ಪ್ರಕಟವಾಯಿತು ಎಂದಾದ ೧೫ ದಿವಸಗಳೊಳಗೆ ಗಟ್ಟಿ ಮೊತ್ತದ ನೆಚ್ಚಿನ ಐಟಂ ಗ್ಯಾರಂಟಿ ಅಂತ ಕಡಾಖಂಡಿತ ಅಂತ
ಲೆಕ್ಕ. ನಂದು ಏನಾಯಿತು? ಯಾವಾಗ? ಅಂತೆಲ್ಲಾ ಮೈಲ್ ಮಾಡಿದರೆ ಅವರು ಅಪ್ಪನಾಣೆ ಉತ್ತರಿಸುವುದಿಲ್ಲ. ಹೋಗಲಿ ಬಿಡಿ ಅದೂ ಒಂಥರಾ ಥ್ರಿಲ್ ಇರುತ್ತದೆ. ಸುಧಾ ಕೂಡ ಹಾಗೆಯೇ ಆದರೆ ಇವರೆಲ್ಲಾ ಫೋನ್ ಮಾಡಿದರೆ ಉತ್ತರಿಸುತ್ತಾರೆ.
ಕನ್ನಡ ಪ್ರಭ ವೂ ಕೂಡ ವಾಪಾಸ್ ಮೈಲ್ ಮಾಡದಿದರೂ ಪ್ರತಿ ಕಳುಹಿಸದಿದ್ದರೂ ಬರಹಗಾರರ ಸಂಭಾವನೆ ತಿಂದು ತೇಗುವುದಿಲ್ಲ. ತಿಂಗಳೊಳಗೆ ತಲುಪುತ್ತದೆ.
ನಮ್ಮ ಬರಹಗಾರ ಮಿತ್ರ ಮಾವೆಂಸ ವಿಜಯಕರ್ನಾಟಕದ ಬಗ್ಗೆ ತಮ್ಮ ಬ್ಲಾಗ್ನ ಲ್ಲಿ ಒಮ್ಮೆ ಹಣ ಕಳುಹಿಸದಿರುವ ಬಗ್ಗೆ ಹೇಳಿದ್ದರು. ಅವರು ವೈಯಕ್ತಿಕವಾಗಿ ಸಿಕ್ಕಾಗ ಚರ್ಚೆಯೂ ಆಯಿತು. ಎಂಬಲ್ಲಿಗೆ ಮಾವೆಂಸ ರಿಗೆ ಬಹಳ ಕಷ್ಟಪಟ್ಟು ಬರೆದ ಲೇಖನದ ಗೌರವ ಧನ ಮಟಾಶ್.
ನಾನೂ ಕಳೆದ ವರ್ಷ ಸುಮಾರು ೫೦ ಲೇಖನ ಕಳುಹಿಸಿದೆ ವಿಜಯಕರ್ನಾಟಕಕ್ಕೆ . ಬಹುಪಾಲು ಎಲ್ಲವೂ ಪ್ರಕಟವಾಯಿತು. ಗೌರವಧನಕ್ಕೆ ಕಾದಿದ್ಡೆ ಬಂತು. ಸಂಪಾದಕರಿಗೆ ಸೇರಿ ಮೈಲ್ ಮಾಡಿದರೆ ಅದೇ ನಿರುತ್ತರ.
ಯಾಕೆ ಹೀಗೆ ಮಾಡುತ್ತಾರೋ? ಇದೇ ಪ್ರಪಂಚವೋ? ಹೇಳುವುದೊಂದು ಮಾಡುವುದೊಂದೋ...? ಅರ್ಥವಾಗದಪ್ಪ. ಇಷ್ಟು ಬರೆದ ಮೇಲಂತೂ ಇನ್ನು ಅತ್ತ ಮುಖಬೇರೆ ಹಾಕುವಂತಿಲ್ಲ. ಹಣವೂ ಇಲ್ಲ ಗುಣವೂ ಇಲ್ಲ.

4 comments:

Ravi Hegde said...

ಶರ್ಮ ಸರ್,
ಕಳೆದ ೬-೮ ಹಿಂದಿನ ಮಾತು, ವಿಜಯ ಕರ್ನಾಟಕದವರು ನನ್ನ ಬ್ಲಾಗಿನ ಫೋಟೋ ವನ್ನ ಗೊತ್ತಿಲ್ಲದೇ ಪ್ರಕಟಿಸಿ (ನನ್ನ್ನ ಬ್ಲಾಗ್ ನೋಡಿ ವಿವರಗಳಿಗೆ) ನಂತರ ತಪ್ಪು ಅಂತ ಒಪ್ಪಿಕೊಂಡು ಜೊತೆಗೆ
ಗೌರವ ಧನ ಕಳಿಸುತ್ತೇನೆ ಅಂತ (ಆಗಿನ) ಉಪ ಸಂಪಾದಕರು ರೈಲು ಬಿಟ್ಟಿದ್ದರು.
(ಆಗಿನ) ಉಪ ಸಂಪಾದಕರು ವಿಜಯ ಕರ್ನಾಟಕ ಬಿಟ್ಟರು , ಜೊತೆಗೆ ನನ್ನ ಗೌರವ ಧನವು ಗೋವಿಂದ .. ಗೋವಿಂದ ..

Dr.D.T.krishna Murthy. said...

ಜಯಹೇ ಕರ್ನಾಟಕ ಮಾತೇ!ಕನ್ನಡ ,ಕನ್ನಡ ಅಂದವರ ಗತಿ ಹೀಗೂ ಆಗುತ್ತೆ!ಹಣವೂ ಇಲ್ಲ,ಗುಣವೂ ಇಲ್ಲ!

ಮಾವೆಂಸ said...

ಇವತ್ತು ನಾನು, ಶ್ರೀಶಂ ಹೇಳಿದ ದೂರನ್ನು ನನಗೆ ಒಮ್ಮೆ ಖ್ಯಾತ ಸಾಹಿತಿಗಳಾದ ನಾ.ಡಿಸೋಜಾರೇ ಪರೋಕ್ಷವಾಗಿ ಹೇಳಿದ್ದರು. ಒಂದು ಸಮಾರಂಭದಲ್ಲಿ ನನ್ನನ್ನು ‘ಈಗ ಎಲ್ಲಿ ಬರೆಯುತ್ತಿದ್ದೀರಿ’ ಎಂದು ಕೇಳಿದಾಗ ನಾನು ವಿಜಯ ಕರ್ನಾಟಕದಲ್ಲಿ ಎಂದಾಗ ಅವರು ಉದ್ಗರಿಸಿದ್ದು ಇಷ್ಟೇ, ‘ಅವರು ದುಡ್ಡು ಕೊಡುತ್ತಾರೇನ್ರೀ?’ ನಾನು ಎಚ್ಚರಗೊಳ್ಳಲಿಲ್ಲ!
ಅದಕ್ಕೆ ಕಾರಣವೂ ಇತ್ತು, ಹಿಂದೊಮ್ಮೆ ಕೃಷಿ ಪುರವಣಿಗೆ ಬರೆದ ಲೇಖನಗಳಿಗೆ ಚೆಕ್ ಬಾರದಿದ್ದರಿಂದ ಅದಕ್ಕೆ ಬರೆಯಬಾರದು ಎಂದು ತೀರ್ಮಾನಿಸಿದ್ದೆ. ಇದ್ದಕ್ಕಿದ್ದಂತೆ ನನ್ನ ಬ್ಲಾಗ್ ನೋಡಿ ಈಗ ವಿಕೆಯ ಲವ್‌ಲವಿಕೆ ನೋಡಿಕೊಳ್ಳುತ್ತಿರುವ ಕರಿಸ್ವಾಮಿಯವರು ಅಕ್ಷರಶಃ ತರಾಟೆಗೆ ತೆಗೆದುಕೊಂಡರು. ಮೊದಲು ನಮ್ಮ ಪತ್ರಿಕೆಗೆ ಈ ಬರಹ ಕಳುಹಿಸಿ ನಂತರ ನಿಮ್ಮ ಬ್ಲಾಗ್‌ನಲ್ಲಿ ಹಾಕಿ ಎಂದು. ನಾನು ಹಿಂದೆ ಹೊಡೆತ ತಿಂದ ಸುದ್ದಿ ಹೇಳಿದಾಗ ಗೌರವಧನವನ್ನು ನಿಮಗೆ ಕೊಡುವುದು ನಮ್ಮ ಜವಾಬ್ದಾರಿ ಎಂದು ಭರವಸೆ ಇತ್ತಿದ್ದರು. ಆ ವಿಶ್ವಾಸಕ್ಕೆ ಬರೆದೆ. ಆದರೆ......
ಮತ್ತೆ ಐದಾರು ಲೇಖನಕ್ಕೆ ಗೌರವಧನ ಬಾರದಿದ್ದಾಗ ಅವರನ್ನು ಮಾತನಾಡಿಸಿದ್ದೆ. ಲೇಖನಗಳ ಪಟ್ಟಿ ಕಳುಹಿಸಲು ಹೇಳಿ ಕೈ ತೊಳೆದುಕೊಂಡಿದ್ದರು. ಕೊನೆಗೆ ನಾನು ಬ್ಲಾಗ್‌ನಲ್ಲಿ ಚುಟುಕಾಗಿ ಈ ಬಗ್ಗೆ ಬರೆದದ್ದನ್ನು ನೋಡಿ ಹೇಳಿದರಂತೆ, ಅವರು ಬ್ಲಾಗ್‌ನಲ್ಲಿ ಕಾರಿಕೊಂಡಿದ್ದಾರೆ. ಇನ್ನು ಗೌರವಧನ ಕಳುಹಿಸುವ ಪ್ರಶ್ನೆಯಿಲ್ಲ. ಹೇಗಿದೆ ನೋಡಿ ಸತ್ಯ ಹೇಳುವುದರ ಬೆಲೆ?