Thursday, August 9, 2012

ಒಮ್ಮೆ ನೋಡು ಜೋಗಾದ್ ಗುಂಡಿ

ಆಶ್ಲೇಷ ಮಳೆ ಅಬ್ಬರಿಸಿದ ಕಾರಣ ಜೋಗ ಜಲಪಾತ ತುಂಬಿ ತುಳುಕಾಡುತ್ತಿದೆ. ನಿತ್ಯ ಪ್ರವಾಸಿಗರ ಧಾಳಿಯಿಂದ ಗಿಜಿಗಿಜಿ ಎನ್ನುತ್ತಿದೆ ಜೋಗ. ನಿಮಗೂ ಹೇಗೂ ಪುರ್ಸೊತ್ತಿದ್ದರೆ ಬಂದು ಹೋಗಬಹುದು. ಇಲ್ಲ ಆಗಲ್ಲ ಅಂತಾದ್ರೆ ಒಮ್ಮೆ  ಈ ಫೋಟೋ ನೋಡಿ ಕಣ್ತುಂಬಿಕೊಂಡು ಬಿಡಿ. ಯಾಕಂದ್ರೆ "ಸಾಯೊದ್ರೊಳಗೆ ಒಮ್ಮೆ ನೋಡು ಜೋಗಾದ್ ಗುಂಡಿ" ಅಂಬೋ ಕವಿ ವಾಣಿಯನ್ನು   ಬೆಂಬಲಿಸಬೇಕಲ್ಲ ಹಾಗಾಗಿ. ಶುಭದಿನ

2 comments:

-ಹೊಸ್ಮನೆ ಮುತ್ತು. ಬೆಂಗಳೂರು said...

ಹನಿ ಕಡಿಯದ ಮಳೆ ಹೀಗೆ ಸುರಿಯುತ್ತಲೇ ಇರಲಿ.
ಬೇಕು ಬೇಕೆಂದಾಗಲೆಲ್ಲ ನೀರು ಹೀಗೆ ಮಳೆಯಾಗಿ
ಹೊಳೆಯಾಗಿ ನೆಲವ ತೋಯಿಸುತಿದ್ದರೆ, ಎಷ್ಟು
ಚೆನ್ನ. ಮಣ್ಣಿನಲಿ ನೀರು ಬೆರೆತು ಹದವರಿತು ಸಸ್ಯ
ರಾಶಿ ನಳನಳಿಸುತ್ತಿದ್ದರೆ ಬಹು ಬಗೆಯ ಪೀಡೆಗಳಿಂದ
ನರಳುತ್ತಿರುವ ಮಾನವ ತುಸುವಾದರೂ ನೆಮ್ಮದಿಯ
ಮುಖ ಹೊತ್ತಾನು ಅಲ್ಲವೇ..? ಹೊಸ ಹೊಸ
ಆವಿಷ್ಕಾರಗಳೆಡೆಗೆ ಮುಖ ಮಾಡಹೊರಟ
ಮಾನವನೆಂಬ ಪ್ರಾಣಿ, ಆಳದಲ್ಲಿ ನೀರು-ಗಾಳಿಗಳಿಗೆ
ವಿಷವುಣಿಸುವ ದುಷ್ಟನಾಗುತ್ತಿದ್ದಾನೆ. ಹೀಗಾಗಿ
ಮಳೆ-ಗಾಳಿಗಳು ಬರುವುದು, ಬೀಸುವುದು ಒಂದು
ಅಪರೂಪದ ಸಂಗತಿಯಾಗಿಬಿಟ್ಟಿದೆ. ಹೀಗೆ
ಅಪರೂಪಕ್ಕೊಮ್ಮೆ ಸಮೃದ್ಧಿಯ ಮಳೆ-ಗಾಳಿಗಳನ್ನು
ಕಂಡಾಗ ಮನದಲ್ಲಿ ಮತ್ತೆ ಹೊಸ ಆಸೆ ಚಿಗುರೊಡೆಯುತ್ತದೆ.
ಪಾಪಿ...! ಯಾಕೆ ಮತ್ತೆ ಬಾಲ್ಯದ ಆ ಮಳೆ ನೆನಪಸಿದ್ದ್ಯೂ...(ಬೇಸರಪಡಡ ಹೀಗಂದದ್ದು ಅದು ಕೇವಲ ಮುದ್ಧಿನಿಂದ)
ಮಳೆ ಅಂದ್ರೆ ಹಾಗೆ ಮಾರಾಯ ಅದೊಂದು ಮಾಯಾ ಲೋಕ. ಈಗ ಕಾಂಕ್ರೀಟ್ ಕಾಡಿನಲ್ಲಿ ಕುಳಿತು, ಅಂದು ಸ್ವಾಂಗೆ ಸೂರಿನ ಅಂಚಿಂದ ಬೀಳುತ್ತಿದ್ದ ದಬ್ಬಣ ಗಾತ್ರದ ಧಾರೆ ನೆನೆದಾಗ ಮನ ತುಂಡಾದ ಹಲ್ಲಿ ಬಾಲದಂತೆ ಮಿಡುಕುತ್ತದೆ.

Muthu B'lore. said...

ಎಷ್ಟು ನೀರು ಹರಿದರೂ ಅಂದು ನಾವೆಲ್ಲಾ, ಬಾರೋ... ಬಾರೋ... ಮಳೆರಾಯ ಅಂತಲೋ,
ಹುಯ್ಯೋ.... ಹುಯ್ಯೋ... ಮಳೆರಾಯ ಅನ್ನುತ್ತಿದ್ದರೆ, ಇಂದಿನ ಮಕ್ಕಳ ಬಾಯಲ್ಲಿ ರೈನ್... ರೈನ್..
ಗೋ ಅವೇ...! ಕಂ ಅಗೈನ್ ಅನದರ್ ಡೇ ... ಅನ್ನುವ ಪದ್ಯ.