ಖುಷ್ ಖುಷಿಯಾಗಿ ಚಪ್ಪರಿಸುತ್ತಾ ತಿಂದ ಆಹಾರ ದೊಡ್ಡಕರುಳನ್ನೂ ದಾಟಿ ನಮ್ಮದೇ ಹೊಟ್ಟೆಯ ಕೆಳಗೆ ಶೇಖರಿಸಲ್ಪಡುತ್ತದೆ. ಅದಕ್ಕೆ ನಾವು ಮಲ ಅಂತ ಅನ್ನುತ್ತೇವೆ. ಅದರ ಬಗೆಗಿನ ಹೇಸಿಗೆ ಎಷ್ಟರಮಟ್ಟಿಗನದು ಎಂದರೆ ಊಟಕ್ಕೆ ಕುಳಿತಾಗ ಯಾರಾದರೂ "ಹೇಲು" ಅಂತ ಅಂದುಬಿಟ್ಟರೆ ಸಾಕು ವ್ಯಾಕ್ ಅಂತ ಅಂದುಬಿಡುವಷ್ಟು. ಆದರೂ ನಮ್ಮದೇ ಆದ ಹೊಟ್ಟೆಯೊಳಗೆ ಅದು ತನ್ನದೇ ಆದ ಜಾಗ ಗಿಟ್ಟಿಸಿಕೊಂಡು ಘಮ್ಮನೆ ಸುಮ್ಮನೆ ಕುಳಿತಿದೆ. ಒಳಗಿರುವಾಗ ನಮ್ಮಜೊತೆಗಿದ್ದದ್ದು ಹೊರಬಿದ್ದಮೇಲೆ ಅದು ವ್ಯಾಕ್, ಛಿ ಥೂ. ಎಂಬಲ್ಲಿಗೆ ಒಳಗೆ ಇದ್ದಾಗ ಅದೂ ಕೂಡ ಓಕೆ.
ಹಾಗೆಯೇ ದಿನನಿತ್ಯದ ಆಲೋಚನೆಗಳು. ಕ್ಷಣ ಕ್ಷಣಕ್ಕೂ ಬೇಕಾದ್ದೂ ಬೇಡಾದ್ದೂ ಅಸಹನೆ ಸಿಟ್ಟು ಶಾಂತ ಹೀಗೆ ನಾನಾ ಬಗೆಯ ರೂಪ ತಳೆದು ಒಳಮನಸ್ಸು ಗುಣುಗುಣಿಸುತ್ತಲೇ ಇರುತ್ತದೆ. ಸರಿ ಅವು ಒಳಗಡೆ ನಡೆಯುವ ಮಥನಗಳು, ಅವುಗಳನ್ನ ಮಥಿಸಿ ಅದರ ಸತ್ವವನ್ನಷ್ಟೇ ಹೊರಹಾಕಿದವನು ಯಶಸ್ವಿಯಾಗುತ್ತಾನೆ. ಒಳಗಿನ ಎಲ್ಲಾ ಆಲೋಚನೆಯನ್ನೂ ಹೊರಹಾಕುತ್ತಲೇ ಹೋದರೆ ನಿಧಾನ ಗತಿಯಲ್ಲಿ ಹೊರಪ್ರಪಂಚಕ್ಕೆ ವ್ಯತ್ಯಾಸದ ಮನುಷ್ಯನಾಗಿಬಿಡುತ್ತಾನೆ.
ಅಂತ ಬಲ್ಲವರು ಹೇಳ್ತಾರೆ. ನಿಮಗಿಷ್ಟವಾದಕಡೆ ಈ ಮೇಲಿನವುಗಳನ್ನು ಬಳಸಿಕೊಂಡು ಧನ್ಯೋಸ್ಮಿ ಅಂತಾದರೆ ನನಗಷ್ಟು ಸಾಕು.
No comments:
Post a Comment