Friday, January 21, 2011

ಹಣವೂ ಇಲ್ಲ ಗುಣವೂ ಇಲ್ಲ ಕಾಮೆಂಟ್

ನನ್ನ ಹಣವೂ ಇಲ್ಲ ಗುಣವೂ ಇಲ್ಲ ಬರಹಕೆ ಮಾವೆಂಸ ಹೇಳಿದ್ದು( http://mavemsa.blogspot.com)
ಇವತ್ತು ನಾನು, ಶ್ರೀಶಂ ಹೇಳಿದ ದೂರನ್ನು ನನಗೆ ಒಮ್ಮೆ ಖ್ಯಾತ ಸಾಹಿತಿಗಳಾದ ನಾ.ಡಿಸೋಜಾರೇ ಪರೋಕ್ಷವಾಗಿ ಹೇಳಿದ್ದರು. ಒಂದು ಸಮಾರಂಭದಲ್ಲಿ ನನ್ನನ್ನು ‘ಈಗ ಎಲ್ಲಿ ಬರೆಯುತ್ತಿದ್ದೀರಿ’ ಎಂದು ಕೇಳಿದಾಗ ನಾನು ವಿಜಯ ಕರ್ನಾಟಕದಲ್ಲಿ ಎಂದಾಗ ಅವರು ಉದ್ಗರಿಸಿದ್ದು ಇಷ್ಟೇ, ‘ಅವರು ದುಡ್ಡು ಕೊಡುತ್ತಾರೇನ್ರೀ?’ ನಾನು ಎಚ್ಚರಗೊಳ್ಳಲಿಲ್ಲ!
ಅದಕ್ಕೆ ಕಾರಣವೂ ಇತ್ತು, ಹಿಂದೊಮ್ಮೆ ಕೃಷಿ ಪುರವಣಿಗೆ ಬರೆದ ಲೇಖನಗಳಿಗೆ ಚೆಕ್ ಬಾರದಿದ್ದರಿಂದ ಅದಕ್ಕೆ ಬರೆಯಬಾರದು ಎಂದು ತೀರ್ಮಾನಿಸಿದ್ದೆ. ಇದ್ದಕ್ಕಿದ್ದಂತೆ ನನ್ನ ಬ್ಲಾಗ್ ನೋಡಿ ಈಗ ವಿಕೆಯ ಲವ್‌ಲವಿಕೆ ನೋಡಿಕೊಳ್ಳುತ್ತಿರುವ ಕರಿಸ್ವಾಮಿಯವರು ಅಕ್ಷರಶಃ ತರಾಟೆಗೆ ತೆಗೆದುಕೊಂಡರು. ಮೊದಲು ನಮ್ಮ ಪತ್ರಿಕೆಗೆ ಈ ಬರಹ ಕಳುಹಿಸಿ ನಂತರ ನಿಮ್ಮ ಬ್ಲಾಗ್‌ನಲ್ಲಿ ಹಾಕಿ ಎಂದು. ನಾನು ಹಿಂದೆ ಹೊಡೆತ ತಿಂದ ಸುದ್ದಿ ಹೇಳಿದಾಗ ಗೌರವಧನವನ್ನು ನಿಮಗೆ ಕೊಡುವುದು ನಮ್ಮ ಜವಾಬ್ದಾರಿ ಎಂದು ಭರವಸೆ ಇತ್ತಿದ್ದರು. ಆ ವಿಶ್ವಾಸಕ್ಕೆ ಬರೆದೆ. ಆದರೆ......
ಮತ್ತೆ ಐದಾರು ಲೇಖನಕ್ಕೆ ಗೌರವಧನ ಬಾರದಿದ್ದಾಗ ಅವರನ್ನು ಮಾತನಾಡಿಸಿದ್ದೆ. ಲೇಖನಗಳ ಪಟ್ಟಿ ಕಳುಹಿಸಲು ಹೇಳಿ ಕೈ ತೊಳೆದುಕೊಂಡಿದ್ದರು. ಕೊನೆಗೆ ನಾನು ಬ್ಲಾಗ್‌ನಲ್ಲಿ ಚುಟುಕಾಗಿ ಈ ಬಗ್ಗೆ ಬರೆದದ್ದನ್ನು ನೋಡಿ ಹೇಳಿದರಂತೆ, ಅವರು ಬ್ಲಾಗ್‌ನಲ್ಲಿ ಕಾರಿಕೊಂಡಿದ್ದಾರೆ. ಇನ್ನು ಗೌರವಧನ ಕಳುಹಿಸುವ ಪ್ರಶ್ನೆಯಿಲ್ಲ. ಹೇಗಿದೆ ನೋಡಿ ಸತ್ಯ ಹೇಳುವುದರ ಬೆಲೆ?
ಬಜ್ ಮಿತ್ರರು ಹೇಳಿದ್ದು
ದಿವ್ಯಾ ... - Right time to make some decision..Jan
PARANJAPE KN. - ಬಿಡಬೇಡಿ, claim ಮಾಡಿ, ನಿಮಗೆ ನ್ಯಾಯವಾಗಿ ಸಿಗಲೇಬೇಕಲ್ಲ. ಪತ್ರಿಕಾ ಕಚೇರಿ ಮುಂದೆ ಧರಣಿ ಕೂರಬೇಕಾದ್ರೆ ಕರೀರಿ... ಬರುವೆ.
Santhosh Acharya - ನನಗಂತು ಇಲ್ಲಿಯವರೆಗೆ ಸಂಭಾವನೆ ಸಿಗುತ್ತದೆ ಎಂದೇ ಗೊತ್ತಿರಲಿಲ್ಲ. :)
navyajyothi - ಸರ್ ಕೇವಲ ವಿಕ ಮಾತ್ರವಲ್ಲ ಇನ್ನೂ ಹಲವು ಪತ್ರಿಕೆಗಳು ಇಂಥಾ ಜಾಯಮಾನ ಹೊಂದಿವೆ.
PARANJAPE KN. - ಆ ಪತ್ರಿಕೆಗಳು ಯಾವುವು ಅ೦ತ ತಾವು ಹೇಳಿದರೆ ನಾವು ಸ್ವಲ್ಪ ಹುಶಾರಾಗಿರಬಹುದು ನವ್ಯಜ್ಯೋತಿಯವರೇ
Palachandra M - "ವಿಕದಲ್ಲಿ ನಿಮ್ಮ ಲೇಖನ ಪ್ರಕಟಿಸೋದೇ ಹೆಮ್ಮೆಯ ವಿಷಯ, ಅದೇ ನಿಮಗೆ ಸಂಭಾವನೆ" ಅಂತ ಪತ್ರಿಕೆಯವರ ಅನಿಸಿಕೆ ಇರಬಹುದು.. ಆದ್ರೂ ಒಂದ್ ಹತ್ತು ಲೇಖನ ಕಳ್ಸಿದಮೇಲೆ ಸಂಭಾವನೆ ಬರ್ಲಿಲ್ಲಾ ಅಂದ್ಮೇಲೆ, ಅಲ್ಲಗೇ ನಿಲ್ಲಿಸಬಹುದಿತ್ತಲ್ಲ ಶರ್ಮರೇ..
shivuu.k - ನೀವು ಬರೆದ ಈ ವಿಚಾರವನ್ನು ಅನುಸರಿಸಿ ನಾನು ಈಗ ವಿಜಯ ಕರ್ನಾಟಕದಲ್ಲಿರುವ ಗೆಳೆಯನ ಬಳಿ ಮಾತಾಡಿದೆ. [ಕಾರಣ ನನ್ನದೂ ವಿಜಯ ಕರ್ನಾಟಕದ ಲವಲವಿಕೆಯಲ್ಲಿ ನಾಲ್ಕಾರು ಲೇಖನಗಳು, ತಿಂಗಳಿಗೆ ಎರಡು ಫೋಟೊಗಳು, ವಿಶೇಷಾಂಕದಲ್ಲಿನ ಫೋಟೊಗಳು....ಹೀಗೆ ಸುಮಾರು ಸಂಭಾವನೆ[ರಾಯಲ್ಟಿ]ಬರಬೇಕಿದೆ.] ಅವರು ಹೇಳಿದ ಪ್ರಕಾರ ರಾಯಲ್ಟಿ ಖಂಡಿತ ಕೊಡುತ್ತಾರಂತೆ. ನಾವು ಯಾವ ವಿಭಾಗಕ್ಕೆ ಲೇಖನವನ್ನು ಅಥವ ಫೋಟೊಗಳನ್ನು ಕಳಿಸುತ್ತೇವೋ ಆ ವಿಭಾಗದ ಮುಖ್ಯಸ್ಥರಿಗೆ ಇದುವರೆಗೆ ಬಂದಿರುವ ಚಿತ್ರಗಳು ಮತ್ತು ಲೇಖನದ ಜೆರಾಕ್ಸ್ ತೆಗೆದು ಅದರ ವಿವರಗಳನ್ನು ಅವರಿಗೆ ಪೋಸ್ಟ್ ಮಾಡಿದರೇ ಹಣ ಖಂಡಿತ ಕಳಿಸುತ್ತಾರೆ. ಸಾಧ್ಯವಾದರೆ ಮುಖ್ಯಸ್ಥರ ಫೋನ್ ನಂಬರ್ ಇದ್ದಲ್ಲಿ ಪೋಸ್ಟ್ ಮಾಡಿದ ನಂತರ ಫೋನ್ ವಿಚಾರಿಸಿದರೆ ನಮಗೆ ಸಿಗಬೇಕಾದ ಸಂಭಾವನೆ ಸಿಗುತ್ತದೆ. ಇದು ಈಗ ನಾನು ಮಾತಾಡಿದಾಗ ತಿಳಿದ ವಿಚಾರ. ಈಗ ನಾನು ವಿ ಕ ದಲ್ಲಿ ಬಂದಿರುವ ಫೋಟೊ ಮತ್ತು ಲೇಖನಗಳನ್ನು ಕಲೆ ಹಾಕಿ ನೇರ ಅಫೀಸಿಗೆ ಹೋಗಲು ನಿರ್ಧರಿಸಿದ್ದೇನೆ.
ಸುಧಾ ಅಥವ ಪ್ರಜಾವಾಣಿಯಲ್ಲಿ ಮೊದಲು ಪ್ರಕಟವಾದ ಬರಹಕ್ಕೆ ಸರಿಯಾಗಿ ಚೆಕ್ ಬಂದುಬಿಡುತ್ತಿತ್ತು. ಆದ್ರೆ ಇತ್ತೀಚೆಗೆ ನನ್ನ ಎರಡು ಚಿತ್ರ ಸಹಿತ ಲೇಖನಗಳಿಗೆ ಚೆಕ್ ಬಂದಿಲ್ಲ. ಮೊದಲು ಸರಿಯಾಗಿ ಕಳಿಸುತ್ತಿದ್ದ ಅವರು ಕೂಡ ಬದಲಾಗಿಬಿಟ್ಟಿದ್ದಾರೆ! ಅಲ್ಲಿನ ನಾನು ಚಿತ್ರಗಳು ಮತ್ತು ಲೇಖನ ಕಳಿಸುವುದನ್ನು ನಿಲ್ಲಿಸಿದ್ದೆ.
ಕನ್ನಡಪ್ರಭದವರು ಈ ವಿಚಾರದಲ್ಲಿ ಯಾರಿಗೂ ಮೋಸ ಮಾಡೋಲ್ಲ. ಉದಯವಾಣಿ ಮತ್ತು ತರಂಗದವರು ಸಂಭಾವನೆ ವಿಚಾರದಲ್ಲಿ ಸರಿಯಾಗಿ ಕಳಿಸುತ್ತಾರೆ. ಆದ್ರೆ ವಿಜಯ ಕರ್ನಾಟಕದವರು ಯಾಕೆ ಹೀಗೆ?
ಆದರೂ ನಾನು ಹೋಗಿ ಕೇಳುವವರೆಗೆ ಅವರು ಗಮನಿಸದೇ ಇರುವುದು ಅಥವ ಉದ್ದೇಶಪೂರ್ವಕವಾಗಿ ಹೀಗೆ ಜಾಣ ಮರೆವು ತೋರಿಸುವುದು ಸರಿಯಲ್ಲವೆಂದು ನನ್ನ ಅಭಿಪ್ರಾಯ.
ನಿಮ್ಮ ಜೊತೆ ನಾನಿದ್ದೇನೆ. ಏಕೆಂದರೆ ನನಗೂ ಪ್ರಜಾವಾಣಿ ಮತ್ತು ವಿಜಯ ಕರ್ನಾಟಕದಿಂದ ಸಾಕಷ್ಟು ಸಂಭಾವನೆ ಬರಬೇಕಿದೆ.Jan 20

5 comments:

Ravi Hegde said...

ಶರ್ಮ ಸರ್,
ಅಂದ ಹಾಗೆ ಒಂದು ಫೋಟೋಗೆ ಅಥವಾ ಲೇಖನಕ್ಕೆ ಅಜಮಾಸು ಎಷ್ಟು ಗೌರವಧನ ಕೊಡುತ್ತಾರೆ?

ರವಿ

Unknown said...

ರವಿ

ಅದು ಪತ್ರಿಕೆಗಳ ಮೇಲೆ ಹಾಗೂ ಲೇಖನದ ಗಾತ್ರದ ಮೇಲೆ ಬದಲಾಗುತ್ತದೆ ಪ್ರಜಾವಾಣಿ ಸುದಾ ತರಂಗಗಳಾದರೆ ೪೦೦-೫೦೦ ರೂಗಳವರೆಗೂ ಕೊಡುತ್ತಾರೆ. ಮಿಕ್ಕವರು ೨೦೦-೩೦೦

ಸಂದೀಪ್ ಕಾಮತ್ said...

ರೀ ನೀವು ನಂಬ್ತೀರೋ ಬಿಡ್ತಿರೋ ! ನಾನು ನಿಮ್ಮನ್ನು ವಿ.ಕ ದ ಉದ್ಯೋಗಿ ಅಂದುಕೊಂಡಿದ್ದೆ. ಅಷ್ಟೊಂದು ಲೇಖನ ನೋಡಿದ್ದೆ ನಿಮ್ದು ವಿ.ಕ ದಲ್ಲಿ!

ಬರವಣಿಗೆಯನ್ನೆ ನಂಬಿಕೊಂಡು ಬದುಕಿದರೆ ಚಿಪ್ಪೇ ಗತಿ!

Gowtham said...

ನಿಮಗೆ ಗೂಗಲ್ ನಿಂದ ಚೆಕ್ ಬರುತ್ತಾ? (ಗೂಗಲ್ ad ಗೆ?)

Enggwave said...

Google pays check if your content in English.
So visit my site
www.enggwave.com