ನಮ್ಮೂರಲ್ಲೊಬ್ಬ ಅಜ್ಜಿಯಿಲ್ಲದ ಅಜ್ಜ
ಕಿವಿ ಕೇಳಿಸದು, ಪಾಪ ವಯಸ್ಸಾಗಿದೆ ಬಿಡಿ
ಬಳೆ ಸದ್ದು ಗಜ್ಜೆ ಸಪ್ಪಳ
ಮಾತ್ರ ಕೇಳಿಸುವುದು, ಕುಹಕ ಮಾಡಬೇಡಿ
ನಮ್ಮೂರಲ್ಲೊಬ್ಬ ಅಜ್ಜಿಯಿಲ್ಲದ ಅಜ್ಜ
ಕಣ್ಣು ಕಾಣಿಸದು, ಪಾಪ ವಯಸ್ಸಾಗಿದೆ ಬಿಡಿ
ಸೀರೆಯ ಬಣ್ಣ ಜಡೆಯ ಉದ್ದ
ಮಾತ್ರ ಕಾಣಿಸುವುದು, ವ್ಯಂಗ್ಯಮಾಡಬೇಡಿ.
ನಮ್ಮೂರಲ್ಲೊಬ್ಬ ಅಜ್ಜಿಯಿಲ್ಲದ ಅಜ್ಜ
ನಿಲ್ಲಲಾಗದು, ಪಾಪ ವಯಸ್ಸಾಗಿದೆ ಬಿಡಿ
ಕಾಲೇಜು ಬಸ್ಸಿನಲ್ಲಿ
ಮಾತ್ರಾ ನಿಲ್ಲುವುದು, ತಮಾಷೆ ಮಾಡಬೇಡಿ
ಅಜ್ಜನ ವರ್ತನೆಯಿಂದ ಬೇಸತ್ತವರೆಂದರು
"ಅಜ್ಜಾ ನೀವು ಮದುವೆಯಾಗಿಬಿಡಿ"
ಜೋಲುಮುಖದಿಂದ ಹೇಳಿದ ಅಜ್ಜ
ನನಗ್ಯಾರೂ ಹೆಣ್ಣು ಕೊಡುವುದಿಲ್ಲ ಬಿಡಿ.
3 comments:
Ha Ha Ha good one!!!
Paapa ajja..!
ಎಲಾ....!!!!!!
Post a Comment